ಅರ್ಜುನನ ಸಮಾಧಿ ಬಳಿ ಪೂಜೆ ಸಲ್ಲಿಸಿ ಕಣ್ಣೀರು ಹಾಕಿದ ಮಾವುತ ವಿನು.

ಹಾಸನ ,ಡಿಸೆಂಬರ್,16,2023(www.justkannada.in): 8 ಬಾರಿ ಮೈಸೂರು ದಸರಾ ಅಂಬಾರಿ ಹೊತ್ತು  ಯಶಸ್ವಿಯಾಗಿದ್ದ ಅರ್ಜುನ ಆನೆ   ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಮೃತಪಟ್ಟು 11 ದಿನಗಳು ಕಳೆದಿದ್ದು, ಈ ನಡುವೆ ಅರ್ಜುನನ್ನ ನೆನೆದು ಮಾವುತ ವಿನು ಕಣ್ಣೀರು ಹಾಕಿದ್ದಾರೆ.

11 ದಿನದ ಅರಾದನೆ ಕಾರ್ಯ ಹಿನ್ನೆಲೆ ವಿನು ಕುಟುಂಬ ಸಮೇತವಾಗಿ ಅರ್ಜುನ ಆನೆ ಸಮಾಧಿ ಬಳಿ ಆಗಮಿಸಿ  ಪೂಜೆ ಸಲ್ಲಿಕೆ ಮಾಡಿದರು.  ಅರ್ಜುನನಿಗೆ ಪ್ರಿಯವಾದ ಕಬ್ಬು, ಬೆಲ್ಲ, ಹುಲ್ಲು, ಭತ್ತ, ಅನ್ನದ ಮುದ್ದೆ ಎಡೆ ಇಟ್ಟು, ತಿಂಡಿ ತಿನಿಸು ಹಣ್ಣು ಹಂಪಲು ಇಟ್ಟು ಪೂಜೆ ಸಲ್ಲಿಸಿದರು. ತನ್ನ ಪ್ರೀತಿಯ ಆನೆ ಕಳೆದುಕೊಂಡು ಕಂಗೆಟ್ಟಿರುವ ಮಾವುತನ ಕುಟುಂಬ ಸಮಾಧಿ ಬಳಿ ರೋದಿಸುತ್ತಾ ಕುಳಿತ ದೃಶ್ಯ ಕಂಡು ಬಂದಿತು.

ಈ ವೇಳೆ ಎದ್ದೇಳು ಅರ್ಜುನ ಎಂದು ಮಾವುತ ವಿನು ಬಿಕ್ಕಿ ಬಿಕ್ಕಿ ಅತ್ತಿದ್ದು ಅಪ್ಪ‌ ನನ್ನ ಸ್ವಾಮಿಯನ್ನು ಎಬ್ಬಿಸು. ಎಂತಹ ಧೈರ್ಯವಂತ ನೀನು, ಯಾವ ಆನೆಗೂ ಬಗ್ಗುತ್ತಿರಲಿಲ್ಲ ಎಲ್ಲಾ ಮೋಸ ಮಾಡಿದ್ರು ಎಂದು  ಮಾವುತ ವಿನು ರೋಧಿಸಿದರು.

Key words: Mavuta -Vinu – – Arjuna’s- tomb – tears