Sunday, October 25, 2026

Dasara Wishes

ಆಸ್ತಿ ವಿವಾದಕ್ಕೆ ಹರಿದ ನೆತ್ತರು: ಗುಂಡಿಕ್ಕಿ ಆರು ಮಂದಿಯ ಹತ್ಯೆ DasraWishes_JK DasraWishes JK
Happy Dasara
Home Crime ಪ್ರಾರ್ಥನೆ ಮಾಡುವ ವೇಳೆ ಹೃದಯಘಾತದಿಂದ ವಿದ್ಯಾರ್ಥಿನಿ ಸಾವು.

ಪ್ರಾರ್ಥನೆ ಮಾಡುವ ವೇಳೆ ಹೃದಯಘಾತದಿಂದ ವಿದ್ಯಾರ್ಥಿನಿ ಸಾವು.

ಗುಂಡ್ಲುಪೇಟೆ,ಆಗಸ್ಟ್,9,2023(www.justkannada.in): ಪ್ರಾರ್ಥನೆ ಮಾಡುವ ಸಂದರ್ಭದಲ್ಲಿ  ಹೃದಯಾಘಾತದಿಂದ ವಿಧ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಗುಂಡ್ಲುಪೇಟೆ ಪಟ್ಟಣದ ಸಿಎಂಐ ಕ್ರಿಶ್ಚಿಯನ್ ಹಾಸ್ಟೆಲ್ ನಲ್ಲಿ ನಡೆದಿದೆ.

ಬೆಂಗಳೂರು ಮೂಲದ ಫೆಲಿಶಾ(17) ಮೃತ ಬಾಲಕಿ. ಸಿಎಂಐ ಹಾಸ್ಟೆಲ್ ನಲ್ಲಿದ್ದುಕೊಂಡು ನಿರ್ಮಲಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಫೆಲಿಶಾ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಈ ನಡುವೆ ಚರ್ಚ್ ನಲ್ಲಿ ಪ್ರಾರ್ಥನೆ ಸಮಯದಲ್ಲಿ ಫೆಲಿಶಾ ಕುಸಿದು ಬಿದ್ದಿದ್ದು ತಕ್ಷಣ ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆ ದಾಖಲು ಮಾಡಲಾಗಿತ್ತು.

ಆದರೆ ವಿದ್ಯಾರ್ಥಿನಿ ಫೆಲಿಶಾ ಚಿಕಿತ್ಸೆ ಫಲಕಾರಿಯಾಗದೆ  ಕೊನೆಯುಸಿರೆಳೆದಿದ್ದಾಳೆ. ವಿದ್ಯಾರ್ಥಿನಿ ಶವ ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿಡಲಾಗಿದೆ.

Key words: Student -died – heart attack – praying.