ಟಿಕ್ ಟಾಕ್ ವೀಡಿಯೋ ಮಾಡಲು ಹೋಗಿ ಜೀವ ಕಳೆದುಕೊಂಡ ವಿದ್ಯಾರ್ಥಿನಿ !

ಕೋಲಾರ, ಜುಲೈ 13, 2019 (www.justkannada.in): ಟಿಕ್ ಟಾಕ್ ವಿಡಿಯೋ ಮಾಡುತ್ತಾ ಕೃಷಿ ಹೊಂಡಕ್ಕೆ ಬಿದ್ದು ವಿದ್ಯಾರ್ಥಿನಿ ಮೃತಪಟ್ಟಿರುವ ಘಟನೆ ಕೋಲಾರದಲ್ಲಿ ನಡೆದಿದೆ.

ಕೃಷಿ ಹೊಂಡಕ್ಕೆ ಬಿದ್ದ ಪರಿಣಾಮ ಉಸಿರುಗಟ್ಟಿ ವಿದ್ಯಾರ್ಥಿನಿ ಮಾಲಾ ಮೃತಪಟ್ಟಿದ್ದಾರೆ. ಇತ್ತೀಚಿಗೆ ಟಿಕ್ ಟಾಕ್ ಕೇವಲ ಮನೋರಂಜನೆ ಮಾತ್ರವಾಗಿರದೆ ಯುವಜನತೆ ಮನಸ್ಸಿನ ಜೊತೆ ಚೆಲ್ಲಾಟವಾಡುತ್ತಿದೆ.

ಬ್ಲೂವೇಲ್‌ನಂತೆ ಇದೀಗ ಟಿಕ್ ಟಾಕ್ ಭೂತ ಎಳೆ ವಯಸ್ಸಿನ ಮಕ್ಕಳ ಮನಸ್ಥಿತಿಯನ್ನು ಹಾಳುಗೆಡವುತ್ತಿದೆ. ಟಿಕ್ ಟಾಕ್ ವಿಡಿಯೋ ಮಾಡುತ್ತಾ ಜೀವದ ಜೊತೆ ಚೆಲ್ಲಾಟವಾಡಿಕೊಳ್ಳುತ್ತಿದ್ದಾರೆ.