ನಿವೃತ್ತಿ ಬಳಿಕ ಧೋನಿ ರಾಜಕೀಯಕ್ಕೆ? ಬಿಜೆಪಿಯಲ್ಲಿ ಸೆಕೆಂಡ್ ಇನ್ನಿಂಗ್ಸ್ ?

ನವದೆಹಲಿ, ಜುಲೈ 13, 2019 (www.justkannada.in): ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ನಿಂದ ನಿವೃತ್ತರಾದ ಮೇಲೆ ಬಿಜೆಪಿ ಸೇರಿ ರಾಜಕೀಯ ರಂಗದಲ್ಲಿ ಎರಡನೇ ಇನಿಂಗ್ಸ್ ಆರಂಭಿಸಲಿದ್ದಾರೆ?

ಇತ್ತೀಚಿನ ಬೆಳವಣಿಗೆಗಳು ಇಂತಹದೊಂದು ಅನುಮಾನಕ್ಕೆ ಕಾರಣವಾಗಿವೆ. ಧೋನಿ ನಿವೃತ್ತರಾದ ಬಳಿಕ ಬಿಜೆಪಿ ಸೇರಲಿದ್ದಾರೆಂದು ಕೇಂದ್ರ ಮಾಜಿ ಸಚಿವ ಮತ್ತು ಪಕ್ಷದ ಮುಖಂಡ ಸಂಜಯ್ ಪಾಸ್ವಾನ್ ಸುಳಿವು ನೀಡಿದ್ದಾರೆ.

ಧೋನಿ ನನ್ನ ಪರಮಿತ್ರರು ಅವರಿಗೆ ಬಿಜೆಪಿ ಬಗ್ಗೆ ಅಪಾರ ಗೌರವ ಮತ್ತು ಒಲವು ಇದೆ. ಅವರನ್ನು ತಮ್ಮ ಪಕ್ಷಕ್ಕೆ ಆಹ್ವಾನಿಸಲು ನಾವು ಸಿದ್ಧರಿದ್ದೇವೆ. ಆದರೆ ಕ್ರಿಕೆಟ್‍ಗೆ ವಿದಾಯ ಹೇಳಿದ ನಂತರವಷ್ಟೇ ಇದು ಸಾಧ್ಯವಾಗಲಿದೆ ಎಂದು ಪಾಸ್ವಾನ ತಿಳಿಸಿದ್ದಾರೆ.