ಇಂದಿನಿಂದ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ವಿರೋಧಿಸಿ ಮುಷ್ಕರ: ಹಾಲು, ಮೊಸರು, ಕಾಫಿ, ಟೀ, ಸಿಗಲ್ಲ

ಬೆಂಗಳೂರು,ಜುಲೈ,23,2025 (www.justkannada.in): ವಾಣಿಜ್ಯ ತೆರಿಗೆ ಇಲಾಖೆಯ ನೋಟಿಸ್ ವಿರುದ್ಧ ವರ್ತಕರು ಸಮರ ಸಾರಿದ್ದು, ಇಂದಿನಿಂದ ಬೇಕರಿ, ಕಾಂಡಿಮೆಂಟ್ಸ್ ಮಾಲೀಕರು ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ವಿರೋಧಿಸಿ ಪ್ರತಿಭಟನೆ ಕೈಕೊಂಡಿದ್ದಾರೆ.  ಈ ಹಿನ್ನೆಲೆಯಲ್ಲಿ ಬೇಕರಿಯಲ್ಲಿ ಹಾಲು, ಮೊಸರು, ಮಜ್ಜಿಗೆ, ಕಾಫಿ, ಟೀ ಸಿಗುವುದಿಲ್ಲ.

ಜುಲೈ 25ರಂದು ನಗರದಲ್ಲಿ ಬೇಕರಿ, ಕಾಂಡಿಮೆಂಟ್ಸ್ ಅಂಗಡಿಗಳನ್ನು ಬಂದ್ ಮಾಡಲಾಗುತ್ತಿದ್ದು,  ಇಂದಿನಿಂದ ಕಪ್ಪುಪಟ್ಟಿ ಧರಿಸಿ ವ್ಯಾಪಾರ ಮಾಡಲು ನಿರ್ಧರಿಸಲಾಗಿದೆ. ಹಾಲು ಉತ್ಪನ್ನಗಳ ಮಾರಾಟ ನಿಷೇಧಿಸಿ ಹೋರಾಟ ಕೈಗೊಂಡಿಂದ್ದು, ಹಾಲು ಉತ್ಪನ್ನಗಳ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಜುಲೈ 25ರಂದು ಫ್ರೀಡಂ ಪಾರ್ಕ್ ನಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಸಣ್ಣ ವ್ಯಾಪಾರಿಗಳು ನಿರ್ಧಾರ ಕೈಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಹಾಲು, ಮೊಸರು, ಮಜ್ಜಿಗೆ, ಕಾಫಿ, ಟೀ ಸಿಗುವುದಿಲ್ಲ  ನಾಳೆ ಸಿಗರೇಟ್, ಗುಟ್ಕಾ ಇನ್ನಿತರ ವಸ್ತು ಸಿಗುವುದು ಡೌಟ್.vtu

Key words:  Small traders, protest, Commercial Tax Department