ಬೀದಿಬದಿ ವ್ಯಾಪಾರಿಗಳಿಂದ ವಸೂಲಿ : ಎಎಸ್ಐ, ಕಾನ್ ಸ್ಟೇಬಲ್ ಅಮಾನತು…!

ಮೈಸೂರು,ಡಿಸೆಂಬರ್,24,2020(www.justkannada.in) : ಮೈಸೂರಿನಲ್ಲಿ ಪೊಲೀಸರ ರಾಜಾರೋಷವಾಗಿ ಮಾಮೂಲಿ ವಸೂಲಿ ಮಾಡುವಾಗ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದು, ಇಬ್ಬರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.Teachers,solve,problems,Government,bound,Minister,R.Ashok

ಮೈಸೂರಿನ ಲಷ್ಕರ್ ಪೊಲೀಸ್ ಠಾಣೆ ಎಎಸ್ಐ ಕುಮಾರಸ್ವಾಮಿ ಹಾಗೂ ಕಾನ್ ಸ್ಟೇಬಲ್ ಮಣಿಕಂಠ ಅವರನ್ನು ಅಮಾನತು ಮಾಡಲಾಗಿದೆ.

ಪೊಲೀಸರು ಗಾಂಧಿ ವೃತ್ತದ ಬಳಿ ಪೊಲೀಸ್ ಕಾರಿನಲ್ಲಿ ಕುಳಿತು ಬೀದಿ ಬದಿ ವ್ಯಾಪಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದರು. ಈ ದೃಶ್ಯಗಳನ್ನು ಸಾರ್ವಜನಿಕರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದರು.

streetside-merchants- Dues-ASI-Constable- suspension 

ಈ ವಿಡಿಯೋ ತುಣುಕು ಆಧರಿಸಿ ಕಮಿಷನರ್ ಚಂದ್ರಗುಪ್ತ ಇಬ್ಬರನ್ನು ಅಮಾನತುಗೊಳಿಸಿ ಇಲಾಖೆ ತನಿಖೆಗೆ ಆದೇಶಿಸಿದ್ದಾರೆ ಎಂದು ತಿಳಿದು ಬಂದಿದೆ.

key words : streetside-merchants- Dues-ASI-Constable- suspension