ಶ್ರೀರಂಗಪಟ್ಟಣ ಚಲೋ ತಡೆಯಲು ಸಿದ‍್ಧತೆ: ಸರ್ಕಾರದ ವಿರುದ್ಧ ಪ್ರಮೋದ್ ಮುತಾಲಿಕ್ ಆಕ್ರೋಶ.

ಕಲ್ಬುರ್ಗಿ,ಜೂನ್,4,2022(www.justkannada.in): ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ವಿವಾದ ಸಂಬಂಧ ಹಿಂದೂ ಪರ ಸಂಘಟನೆಗಳು ಇಂದು ಶ್ರೀರಂಗಪಟ್ಟಣ ಚಲೋ ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರ  ಮಸೀದಿ ಸುತ್ತ ಬಿಗಿ ಪೊಲೀಸ್  ಬಂದೋಬಸ್ತ್ ನಿಯೋಜಿಸಲಾಗಿದೆ.

ಈ ಕುರಿತು ಕಲ್ಬುರ್ಗಿಯಲ್ಲಿ ಮಾತನಾಡಿರುವ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಸರ್ಕಾರ ಧರಣಿ ಮಾಡೋರನ್ನ ಬಿಜೆಪಿ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಸರ್ಕಾರ ಧರಣಿ ತಡೆಯುವಂತಹದ್ದು ಸರಿಯಲ್ಲ. ಹೋರಾಟ ತಡೆಯುವ ಕೆಲಸ ಮಾಡಬಾರದು.  ಅತಿಕ್ರಮಣ ಮಾಡಿದವರನ್ನ ಮೊದಲು ಹೊರ ಹಾಕಬೇಕು ಎಂದು ಕಿಡಿಕಾರಿದರು.

ಮಸೀದಿಯಲ್ಲಿ ಆಂಜನೇಯ ದೇಗುಲವಿದ್ದ ಕುರುಹು ಇದೆ.  ಗಣಪತಿ ಮೂರ್ತಿ ಇದೆ. ಅಲ್ಲಿ ಕಲ್ಯಾಣಿ ಬಾವಿ ಇದೆ. ಹಿಂದೂ ಸಂಘಟನೆಗಳ ಹೋರಾಟ ತಡೆಯುವ ಪ್ರಯತ್ನ ಮಾಡಬಾರದು ಎಂದು ಪ್ರಮೋದ್ ಮುತಾಲಿಕ್ ಹೇಳಿದರು.

Key words: stop –Srirangapatna-Chalo-Pramod Muthalik -outrage –against-government.