ಈ ಬಾರಿ ಯಾರೂ ಅಡ್ಡ ಮತದಾನ ಮಾಡಲ್ಲ: ನಾವು ಕಾಂಗ್ರೆಸ್ ನಾಯಕರ ಜೊತೆ ಮಾತನಾಡಿಲ್ಲ- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ.

ಹುಬ್ಬಳ್ಳಿ,ಜೂನ್,4,2022(www.justkannada.in):  ರಾಜ್ಯಸಭೆ ಚುನಾವಣೆ ಸಂಬಂಧ ನಾವು ಕಾಂಗ್ರೆಸ್ ಪಕ್ಷದ ನಾಯಕರ ಜೊತೆ ಮಾತನಾಡಿಲ್ಲ. 32 ಶಾಸಕರನ್ನ ನಂಬಿ ಅಭ್ಯರ್ಥಿಯನ್ನ ಹಾಕಿದ್ದೇವೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಸುದ‍್ಧಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ,  ಕಾಂಗ್ರೆಸ್ ನಾಯಕರ ಹೇಳಿಕೆ ಗಮನಿಸಿದ್ದೇನೆ ನ್ನನ ಆರೋಗ್ಯದ ತಪಾಸಣೆಗಾಗಿ ಸಿಂಗಾಪುರಕ್ಕೆ ಹೋಗಿದ್ದೆ. ಕಾಂಗ್ರೆಸ್ ನಾಯಕರು ಜೆಡಿಎಸ್ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ನಮ್ಮ ಪಕ್ಷದಲ್ಲಿ 32 ಶಾಸಕರಿದ್ದಾರೆ. ಕೆಲವರಿಗೆ ಅಸಮಾಧಾನವಿದೆ. ಆದರೂ ಜೆಡಿಎಸ್ ವಿರುದ್ದ ಮತ ಹಾಕಲ್ಲ. 32 ಮತಗಳು ಜೆಡಿಎಸ್ ಗೆ ಬೀಳುತ್ತೆ ಎಂದರು.

2016ರಲ್ಲಿ ಅಡ್ಡಮತದಾನವಾಗಿತ್ತು. ಈ ಹಿಂದೆ ಅಡ್ಡ ಮತದಾನ ಮಾಡಿದಂತೆ ಈ ಬಾರಿ ಅಂಥಾ ಪ್ರಯತ್ನ ನಡೆಯುವುದಿಲ್ಲ. ಈ ಬಾರಿ ಯಾರೂ ಅಡ್ಡಮತದಾನ ಮಾಡಲ್ಲ.  ಸಿದ್ಧರಾಮಯ್ಯ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದ್ರೋ ಅಥವಾ ಅವರೇ ಹೊಡೆದುಕೊಂಡ್ರೋ ಅಂತಾ ಜೂನ್ 10ರ ಫಲಿತಾಂಶದ ಬಳಿಕ ಗೊತ್ತಾಗುತ್ತೆ ಎಂದು  ಹೆಚ್.ಡಿಕೆ ಟಾಂಗ್ ನೀಡಿದರು.

ನನಗ ತಳಮಳ ನಡುಕ ಯಾವುದು ಇಲ್ಲ. ಜೆಡಿಎಸ್ ಮುಗಿಸಲೇಬೇಕು ಎಂದು ವಿಶ್ಲೇಷಣೆ ಬರುತ್ತಿದೆ. 32 ಶಾಸಕರನ್ನ ನಂಬಿ ಅಭ್ಯರ್ಥಿಯನ್ನ ಕಣಕ್ಕೆ ಇಳಿಸಿದ್ದೇವೆ ಎಂದು ಹೆಚ್.ಡಿಕೆ ತಿಳಿಸಿದರು.

Key words: rajyasabha-election-hubli-Former CM-HD kumaraswamy