ಮೈಸೂರಿನಲ್ಲಿ ‘ಬೆಲ್ ಬಾಟಮ್’ ಸಿನಿಮಾ‌ ಮಾದರಿಯಲ್ಲಿ ಕಳ್ಳತನ !

ಬೆಂಗಳೂರು, ಸೆಪ್ಟೆಂಬರ್ 01, 2020 (www.justkannada.in): ಮೈಸೂರಿನಲ್ಲಿ ಬೆಲ್ ಬಾಟಮ್ ಸಿನಿಮಾ‌ ಮಾದರಿಯಲ್ಲಿ ಕಳ್ಳತನ ಮಾಡಲಾಗಿದೆ.

ಬೀಗ ಹೊಡೆದಿಲ್ಲ, ಬಾಗಿಲು,ಕಿಟಕಿ ಮುರಿದಿಲ್ಲ. ಆದರೂ ಮನೆಯಲ್ಲಿದ್ದ ಎರಡು ಕೆ.ಜಿ.ಚಿನ್ನ ಕಳ್ಳತನ ಮಾಡಲಾಗಿದೆ. ಕಳ್ಳತನದ ವೇಳೆಯಲ್ಲಿ ಮನೆಯಲ್ಲಿ ಬಾಲಕಿ ಕೂಡ ಇದ್ದಳು. ಸಣ್ಣ ಕುರುಹು ಇಲ್ಲದೆ ಚಿನ್ನ ಕದ್ದೊಯ್ದು ಕಳ್ಳರು. ಮಧ್ಯ ರಾತ್ರಿ ಮೂರು ಗಂಟೆ ವೇಳೆಯಲ್ಲಿ ಕಳ್ಳತನ ನಡೆದಿದೆ.

ಬ್ಯಾಂಕ್ ಬೇರೆಡೆ ಸ್ಥಳಾಂತರ ಮಾಡಿದ್ದರಿಂದ ಬ್ಯಾಂಕ್ ನಲ್ಲಿದ್ದ ಚಿನ್ನವನ್ನ ಮನೆಗೆ ತಂದಿದ್ದರು. ಜೊತೆಗೆ ನಮ್ಮ ಮಾವನ ಮನೆ ರಿಪೇರಿ ಹಿನ್ನೆಲೆ ಅವರ ಅರ್ಧ ಕೆ.ಜಿ. ಚಿನ್ನ ಕೂಡ ನಮ್ಮ ಮನೆಯಲ್ಲಿಟ್ಟಿದ್ದರು. “ನನಗೆ ಕೊರೊನಾ ಪಾಸಿಟಿವ್ ಬಂತು, ನಾನು ಸರಿಯಾಗುವಷ್ಟರಲ್ಲೆ ನಮ್ಮ ತಾಯಿ ಕೂಡ ಪಾಸಿಟಿವ್ ಆದ್ರು. ಈ ಗೊಂದಲದಿಂದ ನಾನು ಚಿನ್ನವನ್ನು ಬ್ಯಾಂಕ್ ನಲ್ಲಿ‌ ಇಡಲು ಸಾಧ್ಯವಾಗಲಿಲ್ಲ. ಕಳೆದ ರಾತ್ರಿ ಕೂಡ ತಾಯಿಗೆ ಆರೋಗ್ಯ ಸರಿ ಇಲ್ಲದ ಕಾರಣ ನಾನು ಅಮ್ಮನನ್ನು ಆಸ್ಪತ್ರೆಗೆ ಕರೆದುಕೊಂಡೋಗಿದ್ದೆ” ಎಂದು ಕಳ್ಳತನವಾದ ಮನೆ ಮಾಲೀಕ ವಿಜಯ್ ಕುಮಾರ್ ಹೇಳಿದ್ದಾರೆ.