ಕೇಂದ್ರ ಚುನಾವಣಾ ಆಯೋಗದ ಆಯುಕ್ತರಾಗಿ ಅಧಿಕಾರಿ ರಾಜೀವ್‍ಕುಮಾರ್ ಅಧಿಕಾರ ಸ್ವೀಕಾರ

ನವದೆಹಲಿ, ಸೆಪ್ಟೆಂಬರ್ 01, 2020 (www.justkannada.in): ಕೇಂದ್ರ ಚುನಾವಣಾ ಆಯೋಗದ ಆಯುಕ್ತರಾಗಿ ನಿವೃತ್ತ ಐಎಎಸ್ ಅಧಿಕಾರಿ ರಾಜೀವ್‍ಕುಮಾರ್ ಅಧಿಕಾರ ವಹಿಸಿಕೊಂಡರು.

ಅಶೋಕ್ ನವಾಸ್ಯಾ ಅವರು ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಸ್ಥಾನಕ್ಕೆ ರಾಜೀವ್‍ಕುಮಾರ್ ಅವರನ್ನು ನೇಮಕ ಮಾಡಿ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಆದೇಶ ಹೊರಡಿಸಿದ್ದರು.

1989ನೇ ಬ್ಯಾಚ್‍ನ ಜಾರ್ಖಂಡ್ ಕೇಡರ್‍ನ ಐಎಎಸ್ ಅಧಿಕಾರಿಯಾಗಿದ್ದ ರಾಜೀವ್‍ಕುಮಾರ್ ಅವರು ಬಿಹಾರ ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಹಲವು ಪ್ರಮುಖ ಸ್ಥಾನಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಕೇಂದ್ರ ಆರ್ಥಿಕ ಇಲಾಖೆ ಕಾರ್ಯದರ್ಶಿಯಾಗಿ ಕಳೆದ ಫೆಬ್ರವರಿಯಲ್ಲಿ ನಿವೃತ್ತಿಯಾಗಿದ್ದರು.

ಇಂದು ಚುನಾವಣಾ ಆಯೋಗದ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದುದ, ಇವರ ಸೇವಾ ಅವಧಿ 2025ರವರೆಗೆ ಇದ್ದು, ಮುಂಬರುವ 2024ರ ಲೋಕಸಭಾ ಚುನಾವಣೆಯು ಇವರ ಕಾರ್ಯ ವ್ಯಾಪ್ತಿಗೆ ಬರಲಿದೆ.