ಶವ ಸಾಗಿಸುವ ವಾಹನದ ಸ್ಟೇರಿಂಗ್ ಹಿಡಿದ ಪಾಲಿಕೆ ಸಾಂಖ್ಯಿಕ ಅಧಿಕಾರಿ: ವಿಡಿಯೋ ವೈರಲ್…

ಮೈಸೂರು,ಮೇ,1,2021(www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆಯ ಜತೆಗೆ ಕೊರೋನಾ ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಈ ಮಧ್ಯೆ ಮೈಸೂರು ಮಹಾನಗರ ಪಾಲಿಕೆಯ ಸಾಂಖ್ಯಿಕ ಅಧಿಕಾರಿಯೊಬ್ಬರು ಶವ ಸಾಗಿಸುವ ವಾಹನದ ಸ್ಟೇರಿಂಗ್ ಹಿಡಿದು ವೃತ್ತಿಯಲ್ಲಿ ದಕ್ಷತೆ ಮೆರೆದಿದ್ದಾರೆ.jk

ಶವಗಾರದ ಅಡಳಿತ ಅಧಿಕಾರಿಯಾಗಿ  ಕಾರ್ಯ ನಿರ್ವಹಿಸುತ್ತಿರುವ ಅನಿಲ್ ಕ್ರಿಸ್ಟಿ ಎಂಬುವವರೇ ಶವ ಸಾಗಿಸುವ ವಾಹನ ಸ್ಟೇರಿಂಗ್ ಹಿಡಿದು ವಾಹನ ಚಾಲನೆ ಮಾಡಿರುವುದು. ಇವರು ಪಾಲಿಕೆಯ ಜನನ ಮರಣ ವಿಭಾಗದ ಸಾಂಖ್ಯಿಕ ಅಧಿಕಾರಿ ಯಾಗಿದ್ದು, ಕೊರಾನಾ ಸೋಂಕಿತರ ಶವ ಸಾಗಿಸುವ ವಾಹನದ ಚಾಲಕ  ಗೈರಾದ ಹಿನ್ನಲೆ, ಸ್ವತಃ ಅಧಿಕಾರಿ ಅನಿಲ್ ಕ್ರಿಸ್ಟಿ ಅವರೇ ವಾಹನ ಚಾಲನೆ ಮಾಡಿದ್ದಾರೆ.steering-mysore-city-corporation-officer-video-viral

ಈ ಮೂಲಕ ಅನಿಲ್ ಕ್ರಿಸ್ಟಿ  ವೃತ್ತಿಯಲ್ಲಿ ದಕ್ಷತೆ ಮೆರದಿದ್ದು, ಇದೀಗ  ಇವರು ಶವ ಸಾಗಿಸುವ ವಾಹನ ಚಾಲನೆ ಮಾಡಿರುವ  ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Key words: Steering –mysore city corporation-officer-video -viral.