Sunday, August 9, 2026

BDA Apartments

Home Front Page ಪ್ರಚಾರಕ್ಕೋಸ್ಕರ ಹೇಳಿಕೆ: ಹೆಚ್.ಡಿಕೆ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ- ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ವಾಗ್ದಾಳಿ.

ಪ್ರಚಾರಕ್ಕೋಸ್ಕರ ಹೇಳಿಕೆ: ಹೆಚ್.ಡಿಕೆ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ- ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ವಾಗ್ದಾಳಿ.

ಮೈಸೂರು,ಅಕ್ಟೋಬರ್,13,2021(www.justkannada.in): ಮಾಜಿ ಸಿಎಂಸಿದ್ದರಾಮಯ್ಯ ವಿರುದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅಸಂಬದ್ಧ ಪದ ಬಳಿಕೆ‌  ಕುರಿತು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಕಿಡಿಕಾರಿದ್ದಾರೆ.

ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಎಂ.ಲಕ್ಷ್ಮಣ್,  ಹೆಚ್ ಡಿ ಕುಮಾರಸ್ವಾಮಿ ನಿನ್ನೆ ಅಸಂಸದೀಯ ಪದ ಬಳಕೆ ಮಾಡಿ ಟೀಕಿಸಿದ್ದಾರೆ. ಕುಮಾರಸ್ವಾಮಿ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ.ಜೆಡಿಎಸ್ ಸ್ಥಿತಿ ಹೀನಾಯವಾಗಿರುವುದರಿಂದ ಪ್ರಚಾರಕ್ಕೋಸ್ಕರ ಹೆಚ್ ಡಿಕೆ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸಿದ್ದರಾಮಯ್ಯ ಅವರಿಂದ ಸಮ್ಮಿಶ್ರ ಸರ್ಕಾರ ಬಿತ್ತು ಎಂದು ಆಗಲೇ ಏಕೆ ಹೇಳಲಿಲ್ಲ‌? ಈಗ ಏಕೆ ಹೇಳುತ್ತಿದ್ದೀರಿ?  ಎಂದು ಪ್ರಶ್ನಿಸಿದರು.bjp-creating –confusion- KPCC spokesperson- M. Laxman - Agricultural Amendment Act

ಇತ್ತೀಚೆಗೆ ಕುಮಾರಸ್ವಾಮಿ ಅವರಿಗೆ ಮೆಂಟಲ್ ಇಮ್ಬ್ಯಾಲೆನ್ಸ್ ಆಗಿರಬಹುದು. ಬಿಜೆಪಿಯವರಿಂದ ಸುಪಾರಿ ಪಡೆದಿರಬಹುದು. ಅಥವಾ ಹತಾಶರಾಗಿರಬಹುದು. ಇಲ್ಲ ಪ್ರಚಾರಕ್ಕೆ ಸೂಕ್ಷ್ಮ ವಿಚಾರ ಹೇಳಿದಾಗ ಮೀಡಿಯಾ ಕ್ಯಾಚಿ ಆಗುತ್ತೆ ಅಂತ ಮಾತನಾಡಿರಬಹುದು. ವಿಧಾನಸಭೆ ಚುನಾವಣೆಗೆ ಒಂದೂವರೆ ವರ್ಷ ಬಾಕಿ ಇರುವಾಗ ಏಕೆ ಈ ರೀತಿ ಹೇಳುತ್ತಿದ್ದೀರಿ? ಚಾಮುಂಡಿ ಬೆಟ್ಟದ ಮೇಲೊಂದು ಹೇಳಿಕೆ, ಮೈಸೂರಿನಲ್ಲೊಂದು ಹೇಳಿಕೆ ಏಕೆ ನೀಡಿದ್ದೀರಿ..? ಎಂದು ಎಂ.ಲಕ್ಷ್ಮಣ್ ಪ್ರಶ್ನಿಸಿದರು.

Key words: Statement- HD Kumaraswamy-KPCC spokesperson- M. Laxman