ಕಾಯ್ದೆ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಡಲು ರಾಜ್ಯ ಪ್ರವಾಸ-ಕೃಷಿ ಸಚಿವ ಬಿ.ಸಿ ಪಾಟೀಲ್….

ಬೆಂಗಳೂರು,ಡಿಸೆಂಬರ್,9,2020(www.justkannada.in):  ಅಧಿವೇಶನ ಮುಗಿದ ಬಳಿಕ ರೈತರಿಗೆ ಕಾಯಿದೆ ಮಾಹಿತಿ ನೀಡಲು ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದು, ಪಶುಸಂಗೋಪನೆ, ಸಹಕಾರಿ, ಕಂದಾಯ ಸಚಿವರು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇವೆ. ಪ್ರವಾಸ ಮಾಡಿ ರೈತರ ಕಾಯಿದೆ ತಿದ್ದುಪಡಿಯಿದಾಗುವ ಅನುಕೂಲಕತೆ ಬಗ್ಗೆ ರೈತರಲ್ಲಿ ಮನವರಿಕೆ ಮಾಡಿಕೊಡಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.logo-justkannada-mysore

ಬುಧವಾರ ಮಾಧ್ಯಮಗಳ ಜತೆ ಮಾತನಾಡಿದ  ಸಚಿವ ಬಿ.ಸಿ.ಪಾಟೀಲ್, ರೈತರು ಬಾರುಕೋಲು ಹಿಡಿದು ಚಳುವಳಿ ಮಾಡುವಂಥಹದ್ದೇನಾಗಿಲ್ಲ. ದೇಶ ಹಾಗೂ ರಾಜ್ಯದ ರೈತರ ಅನುಕೂಲಕ್ಕಾಗಿಯೇ ಕಾಯಿದೆ ತರಲಾಗಿದೆ. ಕಾಂಗ್ರೆಸ್ 2019 ರ ಪ್ರಣಾಳಿಕೆಯಲ್ಲಿ ಎಪಿಎಂಸಿ ರದ್ದುಮಾಡಿ ಮುಕ್ತಮಾರುಕಟ್ಟೆ ಮಾಡುವ ಬಗ್ಗೆ ಭರವಸೆ ನೀಡಿದ್ದರು. ನಮ್ಮ ಸರ್ಕಾರ ಅವರು ಹೇಳಿದ್ದನ್ನೇ ಮಾಡಿದೆ. ಇದಕ್ಕೆ ಕಾಂಗ್ರೆಸ್‌ನವರು ಮೆಚ್ಚುಗೆ ವ್ಯಕ್ತಪಡಿಸಬೇಕೇ ಹೊರತು ರಾಜಕೀಯಕ್ಕಾಗಿ ವಿರೋಧಿಸುವುದಲ್ಲ.ಹೇಳಿದ್ದೂ ಕಾಂಗ್ರೆಸ್ಸೇ ವಿರೋಧಿಸುತ್ತಿರುವುದು ಕಾಂಗ್ರೆಸ್ಸೇ ಎಂದರೆ ಏನರ್ಥ? ಎಂದು ಪ್ರಶ್ನಿಸಿದರು.

ದ್ವಿಮುಖ ನಿಲುವನ್ನು ಕಾಂಗ್ರೆಸ್ ಬಿಡಬೇಕು….

ಸಿದ್ದರಾಮಯ್ಯ ಸಹ ಹಿಂದೆ ಕಾಯಿದೆ ತಿದ್ದುಪಡಿಗಾಗಿ ಪತ್ರ ಬರೆದಿದ್ದರು. ಹೂವು ಹಣ್ಣು ತರಕಾರಿಗಳನ್ನು ಎಪಿಎಂಸಿಯಿಂದ ಹೊರಗಿಡಬೇಕು.ಇದರಿಂದ ರೈತರ ಶೋಷಣೆಯಾಗುತ್ತಿದೆ ಎಂದಿದ್ದರು.ರೈತರು ಬುದ್ಧಿವಂತರಿದ್ದಾರೆ.ಅವರಿಗೆ ಸರಿತಪ್ಪುಗಳ ಬಗ್ಗೆ ಅರಿವಿದೆ. ತಾವು ನಡೆಸಿದ ಪ್ರವಾಸದಲ್ಲಿ ಎಲ್ಲಿಯೂ ರೈತರೂ ಈ ಕಾಯಿದೆಗಳನ್ನು ವಿರೋಧಿಸಿಲ್ಲ. ವಿನಾಕಾರಣ ರಾಜಕೀಯಕ್ಕಾಗಿ ಕಾಂಗ್ರೆಸ್ ಸುಮ್ಮನೆ ಆರೋಪಿಸುವುದು ಸರಿಯಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದರೆ ಭರವಸೆ ಈಡೇರಿಸುತ್ತಿರಲಿಲ್ಲವೇ?ದ್ವಿಮುಖ ನಿಲುವನ್ನು ಕಾಂಗ್ರೆಸ್ ಬಿಡಬೇಕು ಎಂದು ಸಚಿವ ಬಿ.ಸಿ ಪಾಟೀಲ್ ಕಿಡಿಕಾರಿದರು.state-tour-convince-farmers-act-agriculture-minister-bc-patil

ಈಗಾಗಲೇ ಒಂದು ಸಾರಿ ಪ್ರವಾಸ ಮಾಡಿದ್ದೇವೆ. ಆದರೆ ಎಲ್ಲಿಯೂ ಕೂಡ ಯಾವ ರೈತರಿಂದಲೂ ಕಾಯಿದೆ ಬಗ್ಗೆ ಅಪಸ್ವರ ಬಂದಿಲ್ಲ. ವಿಧಾನಸಭೆ ಅಧಿವೇಶನ ನಡೆಯೋವಾಗ ಇಂತಹ ಪ್ರತಿಭಟನೆ ಸಹಜ. ಇದರಿಂದ ಸಾರ್ವಜನಿಕರಿಗೆ ಸುಮ್ಮನೆ ತೊಂದರೆ ಕೊಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಕಾಯಿದೆ ಬದಲಾವಣೆ ಇಲ್ಲ. ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ಬಗ್ಗೆ ಸ್ಪಷ್ಟ ಪಡಿಸಿದೆ ಎಂದರು.

ರೈತರ ಬಗ್ಗೆ ಮಾತನಾಡುವ ಎಐಸಿಸಿ ನಾಯಕ ರಾಹುಲ್ ಗಾಂಧಿ ಎಂದಿಗೂ ಹೊಲಕ್ಕೆ ಹೋಗಿ ಕೆಸರು ತುಳಿದಿಲ್ಲ

ರೈತರ ಬಗ್ಗೆ ಮಾತನಾಡುವ ಎಐಸಿಸಿ ನಾಯಕ ರಾಹುಲ್ ಗಾಂಧಿ ಎಂದಿಗೂ ಹೊಲಕ್ಕೆ ಹೋಗಿ ಕೆಸರು ತುಳಿದಿಲ್ಲ. ಅವರಿಗೆ ಹೊಲ ಉಳುಮೆ, ಬಿತ್ತುವುದು ಏನೂ ಗೊತ್ತಿಲ್ಲ. ಅವರ ಮುಂದೆ ಬೆಳೆಗಳನ್ನು ಇಟ್ಟರೆ ಯಾವ ಬೆಳೆ ಎನ್ನುವುದೇ ಗೊತ್ತಿಲ್ಲ. ಇವತ್ತಿಗೂ ರಾಹುಲ್‌ ಗಾಂಧಿಗೆ ಹಾಲು ಎಲ್ಲಿ ಬರುತ್ತದೇ ಎಂಬುದೇ ಗೊತ್ತಿಲ್ಲ. ಅಕ್ಕಿ ಎಲ್ಲಿಂದ ಬರುತ್ತದೆ ಎಂದು ಕೇಳಿದರೆ ಭತ್ತದಿಂದ ಬರುತ್ತದೆ ಎಂದು ಹೇಳಲು ಗೊತ್ತಿಲ್ಲ. ಪಾಪ ಅವರು ಎಲ್ಲೋ ಹೈಫೈ ನಲ್ಲಿ ವಿದೇಶದಲ್ಲಿ ಓದಿಕೊಂಡು ಬಂದಿರುವುದರಿಂದ ಅವರಿಗೆ ರೈತನ ಕಷ್ಟ ಏನು ಗೊತ್ತಿಲ್ಲ ಎಂದು ಸಚಿವ ಬಿ.ಸಿ.ಪಾಟೀಲ್  ಟೀಕಿಸಿದರು.

english summary…

Agriculture Minister to tour the State to educate farmers on the new agriculture bill
Bengaluru, Dec. 9, 2020 (www.justkannada.in): “I along with the Animal Husbandry, Cooperation, and Revenue Ministers will conduct a state wide tour after the assembly session, to educate the farmers about Govt. of India’s new agriculture bill,” opined Agriculture Minister B.C. Patil.
Speaking to the media persons in Bengaluru on Wednesday he said that farmers need to protest as the new agriculture bill has been introduced for the advantage of the farmers. “In its’ 2019 manifesto, the Congress had ensured to cancel APMC and introduce an open market. Our government has done the same, that’s all. The Congress people should in fact appreciate this and should not oppose it with a politically vested interest,” he said.state-tour-convince-farmers-act-agriculture-minister-bc-patil
Keywords: Agriculture Minister/ State tour/ APMC/ new agriculture bill

Key words: State -tour – convince -farmers – Act-Agriculture Minister -BC Patil.