ಭೂ ಸುಧಾರಣಾ ಕಾಯ್ದೆಗೆ ಬೆಂಬಲಿಸಿದ ಜೆಡಿಎಸ್ ವಿರುದ್ಧ ಇತಿಹಾಸ ತಜ್ಞ ಪ್ರೊ.ನಂಜರಾಜೇ ಅರಸ್ ವಾಗ್ದಾಳಿ…

ಮೈಸೂರು,ಡಿಸೆಂಬರ್,9,2020(www.justkannada.in):  ರಾಜ್ಯ ಸರ್ಕಾರದ ಭೂ ಸುಧಾರಣೆ  ಕಾಯ್ದೆಗೆ ಬೆಂಬಲ‌ ನೀಡಿದ ಜೆಡಿಎಸ್ ವಿರುದ್ಧ ಇತಿಹಾಸ ತಜ್ಞ ಪ್ರೊ.ನಂಜರಾಜೇ ಅರಸ್ ವಾಗ್ದಾಳಿ ನಡೆಸಿದ್ದಾರೆ.logo-justkannada-mysore

ಮೈಸೂರಿನಲ್ಲಿ  ಇಂದು ಮಾತನಾಡಿ ಜೆಡಿಎಸ್ ವಿರುದ್ಧ ಆಕ್ರೋಶ ಹೊರ ಹಾಕಿದ ಇತಿಹಾಸ ತಜ್ಞ ಪ್ರೊ.ನಂಜರಾಜೆ ಅರಸ್, ಜೆಡಿಎಸ್  ಬಾಯಲ್ಲಿ ಹೇಳೊದೊಂದು, ಆಂತರಿಕವಾಗಿ ಮಾಡೋದೆ ಒಂದು. ಸಿದ್ದರಾಮಯ್ಯ ಮೇಲೆ ದ್ವೇಷ ಸಾಧಿಸಲು ಜೆಡಿಎಸ್ ಬಿಜೆಪಿ ಜೊತೆ ಕೈ ಜೋಡಿಸಿದೆ ಎಂದು ಆರೋಪಿಸಿದರು.

ನಮಗೆ ರಾಜ್ಯದಲ್ಲಿ ಸ್ವತಂತ್ರವಾಗಿ ಬೆಳೆಯಲು ಆಗಲ್ಲ ಅಂತಾನೋ ಅಥವಾ ಬಿಜೆಪಿಯವ್ರೆ ಹಣ ಕೊಟ್ಟು ಜೆಡಿಎಸ್‌ನ ಕೊಂಡುಕೊಂಡಿದ್ದಾರಾ‌..? ಅಣ್ಣ ತಮ್ಮಂದಿರನ್ನ ಕೈ ಬಿಟ್ಟು ಶತ್ರುಗಳ ಜೊತೆ ಕೈ ಜೋಡಿಸಿದಾಗ ಅನುಮಾನ ಬಂದೇ ಬರುತ್ತಲ್ವೇ..? ಎಂದು ನಂಜರಾಜೇ ಅರಸ್ ಕಿಡಿಕಾರಿದ್ದಾರೆ.history-expert-prof-nanjaraje-arus-barrage-against-jds-supported-land-reform-act

ದೇವೆಗೌಡರು ರೈತರ ಮಗ ಅಂತಾರೆ, ಅವರ ಮಾರ್ಗದರ್ಶನ, ಒಪ್ಪಿಗೆ ಇಲ್ಲದೆ ಬಿಜೆಪಿಗೆ ಬೆಂಬಲಿಸಲು ಸಾಧ್ಯವೇ ಇಲ್ಲ. ಸ್ವಾರ್ಥಕ್ಕಾಗಿ, ಸಿದ್ದರಾಮಯ್ಯರನ್ನ ತುಳಿಯಲು ಬಿಜೆಪಿ ಜೊತೆ ಕೈ ಜೋಡಿಸಿದ್ದಾರೆ. ಜೆಡಿಎಸ್‌ ಪಾಲಿಗೆ ಕಾಂಗ್ರೆಸ್‌ ಅಂದ್ರೆ ಸೋನಿಯಾಗಾಂಧಿ ಅಲ್ಲ, ಸಿದ್ದರಾಮಯ್ಯ ಎಂದು  ಇತಿಹಾಸ ತಜ್ಞ ಪ್ರೊ. ನಂಜರಾಜೇ ಅರಸ್ ಹರಿಹಾಯ್ದರು.

Key words: History expert- Prof. Nanjaraje Arus- barrage –against-JDS – supported -land reform act.