ರಾಜ್ಯಕ್ಕೆ ಇಂದು 1.25 ಲಕ್ಷ ಡೋಸ್ ಕೋವ್ಯಾಕ್ಸಿನ್ ಬಂದಿದೆ- ಆರೋಗ್ಯ ಸಚಿವ ಡಾ.ಕೆ ಸುಧಾಕರ್…

ಬೆಂಗಳೂರು,ಮೇ,25,2021(www.justkannada.in): ಕೇಂದ್ರದಿಂದ ರಾಜ್ಯಕ್ಕೆ ಇಂದು 1.25 ಲಕ್ಷ ಡೋಸ್ ಕೋವ್ಯಾಕ್ಸಿನ್ ಬಂದಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮಾಹಿತಿ ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಕೇಂದ್ರ ಸರ್ಕಾರದ ಕೋಟಾದಡಿಯಲ್ಲಿ ಇಂದು 1.25 ಲಕ್ಷ ಡೋಸ್ ಕೋವ್ಯಾಕ್ಸಿನ್ ಕರ್ನಾಟಕಕ್ಕೆ ಬಂದಿದೆ. ಕೇಂದ್ರದಿಂದ ಪಡೆದ ಒಟ್ಟು ಕೋವ್ಯಾಕ್ಸಿನ್ ಡೋಸ್ 12,91,280. ರಾಜ್ಯವು ನೇರವಾಗಿ ಖರೀದಿಸಿದ ಒಟ್ಟು ಕೋವ್ಯಾಕ್ಸಿನ್ ಡೋಸ್ 1,44,170 ಎಂದು ಟ್ವೀಟ್ ಮಾಡಿದ್ದಾರೆ.state – received- 1.25 lakh doses -covaccine –today-Health Minister- Dr K Sudhakar.

Key words: state – received- 1.25 lakh doses -covaccine –today-Health Minister- Dr K Sudhakar.