Sunday, September 20, 2026

BDA Apartments

ಐದು ತಿಂಗಳಲ್ಲಿ ರಾಜ್ಯ ರಾಜಕಾರಣ ಬದಲಾಗುತ್ತೆ- ಮಾಜಿ ಸಿಎಂ ಬಸವರಾಜ ಬೊಮ್ಮಾಯಿ...
Home Front Page ಐದು ತಿಂಗಳಲ್ಲಿ ರಾಜ್ಯ ರಾಜಕಾರಣ ಬದಲಾಗುತ್ತೆ- ಮಾಜಿ ಸಿಎಂ ಬಸವರಾಜ ಬೊಮ್ಮಾಯಿ.

ಐದು ತಿಂಗಳಲ್ಲಿ ರಾಜ್ಯ ರಾಜಕಾರಣ ಬದಲಾಗುತ್ತೆ- ಮಾಜಿ ಸಿಎಂ ಬಸವರಾಜ ಬೊಮ್ಮಾಯಿ.

ಹಾವೇರಿ,ಮೇ,25,2023(www.justkannada.in): ಐದು ತಿಂಗಳಲ್ಲಿ ರಾಜ್ಯ ರಾಜಕಾರಣ ಬದಲಾಗುತ್ತೆ. ಸರ್ಕಾರ ನಿರ್ಧಾರ ನೋಡಿದ್ರೆ ಹಾಗೆ ಅನ್ನಿಸುತ್ತೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿ ಮಾತನಾಡಿದ  ಮಾಜಿ ಸಿಎಂ ಬಸವರಾಜ ಬೊಮ್ಮಯಿ, ನಾಲ್ಕೈದು ತಿಂಗಳಲ್ಲಿ ರಾಜ್ಯದ ರಾಜಕೀಯ ಚಿತ್ರಣ ಬದಲಾವಣೆಯಾಗಲಿದೆ. ಈ ಸರ್ಕಾರ ಹೋಗುತ್ತಿರುವ  ದಾರಿ ನೋಡಿದರೆ ಬಹಳ ದಿನ‌ ನಡೆಯಲ್ಲ. ಬಿಜೆಪಿ ನಾಯಕರು, ಕಾರ್ಯಕರ್ತರ ಮೇಲೆ ಕೇಸ್ ಹಾಕುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್ ​​ನವರಿಗೆ ನಮ್ಮ ಕಾರ್ಯಕರ್ತರು ತಲೆಬಾಗುವ ಪ್ರಶ್ನೆ ಇಲ್ಲ. ನಾವು ನಮ್ಮ ಹಣದಿಂದ ರಾಜಕೀಯ ಮಾಡುತ್ತಿದ್ದೇವೆ. ನಾವು ತಂದ ಜನಪರ ಕಾನೂನು ರದ್ದುಪಡಿಸಲು ಹೊರಟಿದ್ದಾರೆ ಎಂದು ಕಿಡಿಕಾರಿದರು.ಐದು ತಿಂಗಳಲ್ಲಿ ರಾಜ್ಯ ರಾಜಕಾರಣ ಬದಲಾಗುತ್ತೆ cm bommai cm bommai 6

ಎಲ್ಲೋ ಅಲ್ಪಸ್ವಲ್ಪ ವ್ಯತ್ಯಾಸ ಆಗಿದಕ್ಕೆ ನಾವು ಸೋತಿರಬಹುದು. ಆದರೆ ನಾವು ಸ್ವಾಭಿಮಾನ ಕಳೆದುಕೊಂಡಿಲ್ಲ. ಮೋದಿಯವರ ನೇತೃತ್ವದಲ್ಲಿ ಲೋಕಸಭಾ ಚುನಾವಣೆ ಎದುರಿಸುತ್ತೇವೆ. ರಾಜ್ಯದಲ್ಲಿ ಮತ್ತೆ 25ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಮತ್ತೆ ನರೇಂದ್ರ ಮೋದಿ ಅವರನ್ನ ಪ್ರಧಾನಿಯನ್ನಾಗಿ ಮಾಡುತ್ತೇವೆ ಎಂದರು.

Key words: State –politics- will -change -five months Former CM -Basavaraja Bommai.