Saturday, October 3, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Front Page ಪ್ರಧಾನಿ ಮೋದಿಯಿಂದ ರಾಜ್ಯಕ್ಕೆ ಅನ್ಯಾಯ- ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಿಡಿ.

ಪ್ರಧಾನಿ ಮೋದಿಯಿಂದ ರಾಜ್ಯಕ್ಕೆ ಅನ್ಯಾಯ- ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಿಡಿ.

ಬೆಂಗಳೂರು,ಜುಲೈ,25,2021(www.justkannnada.in): ಬೇರೆ ರಾಜ್ಯದಲ್ಲಿ ನೆರೆ ಬಂದ ವೇಳೆ ಪ್ರಧಾನಿ ಮೋದಿ ಹೋಗುತ್ತಾರೆ. ಆದರೆ ರಾಜ್ಯದಲ್ಲಿ ನೆರೆ ಪರಿಸ್ಥಿತಿ ನಿರ್ಮಾಣವಾದರೇ ಬರುವುದಿಲ್ಲ. ಪ್ರಧಾನಿ ಮೋದಿಯಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಿಡಿಕಾರಿದರು.jk

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಡಿ.ಕೆ ಶಿವಕುಮಾರ್, ಕಳೆದ ವರ್ಷ ಮನೆ ಕಳೆದುಕೊಂಡವರಿಗೆ ಪರಿಹಾರ ಸಿಕ್ಕಿಲ್ಲ. ಪರಿಹಾರ ನೀಡಿಲ್ಲ ಎಂದ ಮೇಲೆ ಏಕೆ ಸರ್ಕಾರ ನಡೆಸಬೇಕು. ಬಿಜೆಪಿಗೆ ಜನರ ಸೇವೆ ಮಾಡಲು ಆಗಲ್ಲ ಎಂಬುದಕ್ಕೆ ಇದೇ ಸಾಕ್ಷಿ. ಸರ್ಕಾರ ಸಂಪೂರ್ಣ ವಿಫಲವಾಗಿದೆ.  ನಡೀರಿ ಚುನಾವಣೆಗೆ ಹೊಸ ಸರ್ಕಾರ ಮಾಡೋಣ ಎಂದು ಹೇಳಿದರು.

ಬಿಎಸ್  ಯಡಿಯೂರಪ್ಪ ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡಿದ ದಿನದಿಂದಲೂ  ಅನಿಶ್ಷಿತತೆ ಉಂಟಾಗಿದೆ.  ಅವರ ಆಡಳಿತ ಇದು ಜನರಿಗೆ ಕೊಟ್ಟ ಕೊಡುಗೆ ಎಂದು ಟೀಕಿಸಿದರು.

ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ನಾವು ಸಮರ್ಥವಾಗಿ ಕೋವಿಡ್ ನಿರ್ವಹಣೆ ಮಾಡಿದ್ದೇವೆ ಎರಡುವರೆ ಕೋಟಿ ಜನರಿಗೆ ನಾವು ಸಹಾಯ ಮಾಡಿದ್ದೇವೆ ಎಂದು ಡಿ.ಕೆ ಶಿವಕುಮಾರ್ ಹೇಳಿದರು.

Key words: state -PM –narendra Modi-  KPCC President -DK Shivakumar