ಬಳ್ಳಾರಿಯಲ್ಲಿ ಇಂದು ರಾಜ್ಯಮಟ್ಟದ ಬಿಜೆಪಿ ಎಸ್ಟಿ ಸಮಾವೇಶ

ಬೆಂಗಳೂರು, ನವೆಂಬರ್ 20, 2022 (www.justkannada.in): ಬಳ್ಳಾರಿಯಲ್ಲಿ ಇಂದು ರಾಜ್ಯಮಟ್ಟದ ಬಿಜೆಪಿ ಎಸ್‌ಟಿ ಸಮಾವೇಶ ನಡೆಯಲಿದೆ.

ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳದ ಸಂಪೂರ್ಣ ಶ್ರೇಯಸ್ಸನ್ನು ರಾಜ್ಯ ಬಿಜೆಪಿ ಸರ್ಕಾರ ತನ್ನದಾಗಿಸಿಕೊಳ್ಳಲು ನಿಟ್ಟಿನಲ್ಲಿ ಬಿಜೆಪಿ ಈ ಸಮಾವೇಶ ಆಯೋಜಿಸಿದೆ.

ಹೆಚ್ಚು ಎಸ್‌ಟಿ ಮೀಸಲು ಕ್ಷೇತ್ರಗಳನ್ನು ಹೊಂದಿರುವ ಬಳ್ಳಾರಿ ಜಿಲ್ಲೆಯಲ್ಲಿ ಎಸ್‌ಟಿ ಸಮಾವೇಶದ ಮೂಲಕ ಮುಂದಿನ ಚುನಾವಣೆಗೆ ಸಿದ್ಧತೆಯನ್ನು ಬಿಜೆಪಿ ಆರಂಭಿಸಿದೆ.

ಸಮಾವೇಶದಲ್ಲಿ ಅಂದಾಜು 10 ಲಕ್ಷ ಜನ ಸೇರುವ ನಿರೀಕ್ಷೆ ಇದ್ದು, ಇದೊಂದು ಐತಿಹಾಸಿಕ ಎಸ್‌ಟಿ ಸಮಾವೇಶ ಆಗಲಿದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.

ಅಂದಹಾಗೆ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಬೆಂಗಳೂರಿಗೆ ಬಂದಾಗ ಮಹರ್ಷಿ ವಾಲ್ಮೀಕಿ ಅವರ ಪುತ್ಥಳಿಗೆ ನಮನ ಸಲ್ಲಿಸಿ ನಮ್ಮ ಸಮಾಜದ ಆತ್ಮಾಭಿಮಾನವನ್ನು ಹೆಚ್ಚಿಸಿದ್ದಾರೆ. ಇದೀಗ ನಡೆಯುತ್ತಿರುವ ಸಮಾವೇಶ ಸಮುದಾಯದ ಬೆಂಬಲ ಪಡೆಯಲು ಸಹಕಾರಿಯಾಗಲಿದೆ ಎಂಬ ಆಶಯ ಬಿಜೆಪಿ ನಾಯಕರಿಗೆ ಇದೆ.