‘ಕಾಂತಾರ’ ಒಟಿಟಿಯಲ್ಲಿ ಬಿಡುಗಡೆಗೆ ಡೇಟ್ ಫಿಕ್ಸ್

ಬೆಂಗಳೂರು, ನವೆಂಬರ್ 20, 2022 (www.justkannada.in): ದೇಶಾದ್ಯಂತ ಹವಾ ಸೃಷ್ಟಿಸಿದ ಕಾಂತಾರ ಚಿತ್ರ ಒಟಿಟಿ ಬಿಡುಗಡೆಗೆ ವೇದಿಕೆ ಸಿದ್ಧಗೊಂಡಿದೆ.

ಈ ಹಿಂದೆ ನವೆಂಬರ್ 4 ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಚಿತ್ರ ಬಿಡುಗಡೆ ಎಂದು ಹೇಳಲಾಗಿತ್ತು. ಆದರೆ ಥಿಯೇಟರ್ ನಲ್ಲಿಯೇ ಉತ್ತಮ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆಯಲ್ಲಿ ಇದು ತಡವಾಗಿತ್ತು.

ಇದೀಗ ಕಾಂತಾರ ಒಟಿಟಿ ಬಿಡುಗಡೆಯನ್ನು ಚಿತ್ರ ತಯಾರಕರು ಅಂತಿಮಗೊಳಿಸಿದ್ದಾರೆ ಎನ್ನಲಾಗಿದೆ. ಎಲ್ಲ ಅಂದುಕೊಂಡಂತೆ ನಡೆದರೆ ನವೆಂಬರ್ 24 ರಂದು ಕಾಂತಾರ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ರಿಲೀಸ್ ಆಗಲಿದೆ.

ನವೆಂಬರ್ 24 ರಂದು ಒಟಿಟಿಯಲ್ಲಿ ಚಿತ್ರ ಬಿಡುಗಡೆಯಾಗುವ ಕುರಿತು ಚಿತ್ರದ ನಿರ್ಮಾಪಕರಿಂದ ಅಧಿಕೃತ ಪ್ರಕಟಣೆ ಆಗಬೇಕಿದೆ.