Saturday, September 12, 2026

BDA Apartments

ಆ್ಯಂಬುಲೆನ್ಸ್ ಗಳಿಗೆ ದರ ನಿಗದಿ ಮಾಡಿ ರಾಜ್ಯ ಸರ್ಕಾರ ಆದೇಶ… BDA JK_Adv BDA Adv
Home Front Page ಆ್ಯಂಬುಲೆನ್ಸ್ ಗಳಿಗೆ ದರ ನಿಗದಿ ಮಾಡಿ ರಾಜ್ಯ ಸರ್ಕಾರ ಆದೇಶ…

ಆ್ಯಂಬುಲೆನ್ಸ್ ಗಳಿಗೆ ದರ ನಿಗದಿ ಮಾಡಿ ರಾಜ್ಯ ಸರ್ಕಾರ ಆದೇಶ…

ಬೆಂಗಳೂರು,ಮೇ,21,2021(www.justkannada.in):  ಮನಸೋ ಇಚ್ಚೆ ಹಣ ವಸೂಲಿ ಮಾಡುವ ಆ್ಯಂಬುಲೆನ್ಸ್ ಗಳಿಗೆ  ರಾಜ್ಯ ಸರ್ಕಾರ ಬ್ರೇಕ್ ಹಾಕಿದ್ದು, ಆಂಬುಲೆನ್ಸ್ ಗಳಿಗೆ ದರ ನಿಗದಿ ಮಾಡಿ ಆದೇಶ ಹೊರಡಿಸಿದೆ.jk

ರಾಜ್ಯ ಸರ್ಕಾರ ಆಂಬ್ಯುಲೆನ್ಸ್ ಗಳಿಗೆ 10 ಕಿ.ಮೀ. ಗೆ 1,500 ರೂ. ದರ ನಿಗದಿ ಮಾಡಿದ್ದು,  10 ಕಿ.ಮೀ ನಂತರ ಪ್ರತಿ ಕಿ.ಮೀಗೆ 150 ರೂ. ನಿಗದಿ ಮಾಡಲಾಗಿದೆ,  ವೈಟಿಂಗ್ ಚಾರ್ಜ್ ಆಗಿ ಪ್ರತಿ ಗಂಟೆಗೆ 200 ರೂ. ನಿಗದಿ ಮಾಡಲಾಗಿದೆ.state-government-orders-charge-ambulances

ಲೈಫ್ ಸಪೋರ್ಟ್ ಆ್ಯಂಬುಲೆನ್ಸ್ ಗೆ 10 ಕಿ.ಮೀ.ಗೆ 2,000 ರೂ. 10 ಕಿ.ಮೀ. ನಂತರ ಪ್ರತಿ ಕಿ.ಮೀ ಗೆ 120 ರೂ. ಪಡೆಯಬೇಕು. ಲೈಫ್ ಸಪೋರ್ಟ್ ಆ್ಯಂಬುಲೆನ್ಸ್ ಕಾಯುವಿಕೆಗೆ ಪ್ರತಿ ಗಂಟೆಗೆ 250 ರೂ. ವನ್ನು ರಾಜ್ಯ ಸರ್ಕಾರ ನಿಗದಿ ಮಾಡಿ ಆದೇಶಿಸಿದೆ.

Key words: State government- orders – charge -ambulances.