ರಾಜಭವನಕ್ಕೆ ಖಾತೆ ಹಂಚಿಕೆ ಪಟ್ಟಿ: ಯಾರಿಗೆ ಯಾವ ಖಾತೆ…?!

ಬೆಂಗಳೂರು, ಆಗಸ್ಟ್ 07, 2021 (www.justkannada.in): ಸಚಿವರ ಪಟ್ಟಿಯನ್ನು ರಾಜಭವನಕ್ಕೆ ಕಳುಹಿಸಲಾಗುತ್ತಿದೆ. ಇನ್ನೊಂದು ಗಂಟೆಯಲ್ಲಿ ಖಾತೆ ಹಂಚಿಕೆ ಪ್ರಕಟಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾತೆ ಹಂಚಿಕೆಯಲ್ಲಿ ಯಾರೂ ಪ್ರಭಾವ ಬೀರಿಲ್ಲ, ಯಾವುದೇ ಗೊಂದಲಗಳೂ ಇಲ್ಲ ಎಂದು ತಿಳಿಸಿದ್ದಾರೆ.

ರಾಜಭವನಕ್ಕೆ ಪಟ್ಟಿ ಕಳುಹಿಸುತ್ತೇವೆ. ಇನ್ನೊಂದು ಗಂಟೆಯಲ್ಲಿ ಸಚಿವರಿಗೆ ಖಾತೆ ಹಂಚಿಕೆ ಪ್ರಕಟವಾಗಲಿದೆ ಎಂದು ತಿಳಿಸಿದ್ದಾರೆ.

ಈ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ಸಚಿವರಿಗೆ ಬಹುತೇಕ ಅದೇ ಖಾತೆಗಳನ್ನು ನೀಡಲಾಗಿದೆ. ಹೊಸಬರಿಗೆ ಮಾತ್ರ ಇತರೆ ಖಾತೆಗಳನ್ನು ಹಂಚಲಾಗಿದೆ ಎನ್ನಲಾಗುತ್ತಿದೆ.