ನಾಳೆಯಿಂದ ಕಾಲೇಜು ಆರಂಭ ; ಮೈಸೂರಿನ ಕಾಲೇಜುಗಳಲ್ಲಿ ಸಿದ್ಧತೆ

ಮೈಸೂರು,ನವೆಂಬರ್,16,2020(www.justkannada.in) ; ನಾಳೆಯಿಂದ ಕಾಲೇಜು ಪುನಾರಂಭ ಹಿನ್ನೆಲೆ ಮೈಸೂರಿನ ಕಾಲೇಜುಗಳಲ್ಲಿ ಸಿದ್ಧತೆ ಭರದಿಂದ ಸಾಗಿದೆ.

kannada-journalist-media-fourth-estate-under-loss

ಪಾಲಿಕೆ ಸಿಬ್ಬಂದಿಯಿಂದ ಕಾಲೇಜು ಸ್ಯಾನಟೈಸ್ 

ಮಹಾರಾಣಿ ಕಾಲೇಜು ಆವರಣ ಮಹಾನಗರ ಪಾಲಿಕೆ ಸಿಬ್ಬಂದಿಯಿಂದ ಕೊಠಡಿ, ಆವರಣ, ಕಚೇರಿ ಸೇರಿದಂತೆ ಇಡೀ ಕಾಲೇಜು ಸ್ಯಾನಟೈಸ್ ಮಾಡಲಾಗಿದೆ.

ಕೊರೊನಾ ನಡುವೆ ಆಫ್‌ಲೈನ್ ತರಗತಿ ಪುನಾರಂಭ ಸವಾಲು

ಮಹಾರಾಣಿ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ‌.ವಿಜಯ್ ಈ ಕುರಿತು ಮಾತನಾಡಿ, ಸರ್ಕಾರದ ಸೂಚನೆ, ಮಾರ್ಗಸೂಚಿಯನ್ವಯ ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಕೊರೊನಾ ನಡುವೆ ಆಫ್‌ಲೈನ್ ತರಗತಿ ಪುನಾರಂಭ ನಮಗೆ ಸವಾಲಾಗಿದೆ ಎಂದಿದ್ದಾರೆ.

ವಿದ್ಯಾರ್ಥಿಗಳು ಕಾಲೇಜಿಗೆ ಬರುವ ಉತ್ಸಾಹ ತೋರಿಸುತ್ತಿದ್ದಾರೆ

ನಮ್ಮಲ್ಲಿ ಅಂತಿಮ ಪದವಿ ತರಗತಿಯ 600 ವಿದ್ಯಾರ್ಥಿಗಳು, ಸ್ನಾತಕೋತ್ತರ ಅಂತಿಮ ತರಗತಿಯ 250 ವಿದ್ಯಾರ್ಥಿಗಳು ಇದ್ದಾರೆ. ವಿದ್ಯಾರ್ಥಿಗಳು ಕಾಲೇಜಿಗೆ ಬರುವ ಉತ್ಸಾಹ ತೋರಿಸುತ್ತಿದ್ದಾರೆ.  ಹೆಚ್ಚಿನ ವಿದ್ಯಾರ್ಥಿಗಳು ಬಂದರೆ ಪಾಳಿ ಪದ್ಧತಿಯಂತೆ ಕ್ಲಾಸ್ ನಡೆಸುತ್ತೇವೆ ಎಂದರು.

ಹೊಸ ಪಾಸ್ ಬರುವವರೆಗೆ ಈಗ ಇರುವ ಬಸ್ ಪಾಸ್‌ಗಳನ್ನೇ ಮುಂದುವರಿಕೆ

ಮುಂದಿನ ದಿನಗಳಲ್ಲಿ ಕಾಲೇಜು ಆವರಣದಲ್ಲೇ ಉಚಿತವಾಗಿ ಕೊರೊನಾ ಟೆಸ್ಟ್ ಮಾಡಿಸುತ್ತೇವೆ. ಕೆಎಸ್‌ಆರ್‌ಟಿಸಿ ಬಸ್ ಪಾಸ್, ಹಾಸ್ಟೆಲ್ ಸೌಲಭ್ಯಗಳ ಗೊಂದಲ ನಿವಾರಣೆ ಮಾಡಿಸಲಾಗುತ್ತಿದೆ. ಹೊಸ ಪಾಸ್ ಬರುವವರೆಗೆ ಈಗ ಇರುವ ಬಸ್ ಪಾಸ್‌ಗಳನ್ನೇ ಮುಂದುವರಿಸುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಮಹಾರಾಣಿ ಕಾಲೇಜು ಪ್ರಾಂಶುಪಾಲ ಡಾ.ವಿಜಯ್ ತಿಳಿಸಿದ್ದಾರೆ.

Starting-college-tomorrow-Preparation-Mysore- Colleges

key words :Starting-college-tomorrow-Preparation-Mysore- Colleges