ಬಿಎಸ್ ವೈ ಸಹಜವಾಗಿ ಮಾತನಾಡಿದ್ದಾರಷ್ಟೇ: ಜನಬೆಂಬಲ ಇರುವ ಶಾಸಕರು ಹೆದರಬೇಕಿಲ್ಲ-ಎಂಎಲ್ ಸಿ ರವಿಕುಮಾರ್

ದಾವಣಗೆರೆ,ಮಾರ್ಚ್,8,2023(www.justkannada.in): ಹಾಲಿ ನಾಲ್ಕೈದು ಶಾಸಕರನ್ನ ಬಿಟ್ಟು ಎಲ್ಲರಿಗೂ ಬಿಜೆಪಿ ಟಿಕೆಟ್ ನೀಡಲಾಗುವುದು ಎಂದು ಮಾಜಿ ಸಿಎಂ ಬಿಎಸ್ ಹೇಳಿಕೆ ವಿಚಾರ ಕುರಿತು ವಿಧಾನ ಪರಿಷತ್ ಸದಸ್ಯ ಎನ್.ರವಿ ಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿದ ರವಿ ಕುಮಾರ್, ಜನರ ಬೆಂಬಲ ಇರುವ ಶಾಸಕರು ಹೆದರಬೇಕಿಲ್ಲ . ನೂರಕ್ಕೆ ನೂರರಷ್ಟು ವಿಶ್ವಾಸದಿಂದ ಕೆಲಸ. ಬಿಎಸ್ ವೈ ಸಹಜವಾಗಿ ಮಾತನಾಡಿದ್ದಾರೆ. ಬಿಜೆಪಿ ಶಾಸಕರು ವಿಶ್ವಾಸದಿಂದ ಕೆಲಸಮಾಡಿ ಎಂದು ಸಲಹೆ ನೀಡಿದರು.

ಬಿಎಸ್ ವೈ ಅವರು ಇಂಥವರಿಗೆ ಟಿಕೆಟ್ ಸಿಗಲ್ಲ ಎಂದು ಹೇಳೀಲ್ಲ. ನಾಲ್ಕಾರು ಮಂದಿಗೆ ಟಿಕೆಟ್ ಸಿಗಲ್ಲ ಎಂದಿದ್ದಾರೆ ಅಷ್ಟೆ ಎಂದು  ಎಂಎಲ್ ಸಿ ರವಿಕುಮಾರ್ ಹೇಳಿದರು.

ಸೋಮಣ್ಣನವರು ಕಾಂಗ್ರೆಸ್​ಗೆ ಹೋಗ್ತಾರೆ ಎನ್ನುವ ಮಾತು ಸುಳ್ಳು,ಈಗಾಗಲೇ ಹಲವು ಕಡೆ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ದೊಡ್ಡ ಪ್ರಮಾಣದಲ್ಲಿ ರೋಡ್ ಶೋ ಮಾಡಿದ್ದಾರೆ. ಸೋಮಣ್ಣ ಅವರು ಪಾರ್ಟಿ ಬಿಡುವ ಪ್ರಶ್ನೇಯೇ ಇಲ್ಲ, ಸೋಮಣ್ಣ ಅವರು ನಾವು ಸೇರಿ ಕಾಂಗ್ರೆಸ್​ನ್ನ ಮನೆಗೆ ಕಳುಹಿಸುವುದು ಗ್ಯಾರಂಟಿ ಎಂದು ತಿಳಿಸಿದರು.

Key words: BSY – spoke- naturally- MLAs not be -afraid – MLC- Ravikumar