ರಾಜ್ಯ ವಿಧಾನಮಂಡಲ ಅಧಿವೇಶನ ಆರಂಭ : ಅಗಲಿದ ಗಣ್ಯರಿಗೆ ಸಂತಾಪ.

ಬೆಂಗಳೂರು,ಸೆಪ್ಟಂಬರ್,13,2021(www.justkannada.in): ರಾಜ್ಯ ವಿಧಾನ ಮಂಡಲ ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ಮೊದಲ ದಿನವಾದ ಇಂದು ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು.

ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಇತ್ತೀಚೆಗೆ ನಿಧನರಾದ. ಸಿಎಂ ಉದಾಸಿ, ರೈತ ಹೋರಾಟಗಾರ ಜಿ. ಮಾದೇಗೌಡ, ಕವಿ ಸಿದ್ಧಲಿಂಗಯ್ಯ ನಟಿ ಜಯಂತಿ, ಕಲ್ಯಾಣ್ ಸಿಂಗ್ ಸೇರಿ ಇತ್ತೀಚೆಗೆ ಮೃತಪಟ್ಟ 31 ಜನರಿಗೆ ಸಂತಾಪ ಸೂಚಿಸಲಾಯಿತು.

ಬೆಲೆ ಏರಿಕೆ, ಜಾತಿಗಣತಿ ಜಾರಿ ವಿಚಾರ, ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ, ಹಲವು ವಿಚಾರಗಳನ್ನ ಮುಂದಿಟ್ಟುಕೊಂಡು ಆಡಳಿತರೂಢ ಬಿಜೆಪಿ ಸರ್ಕಾರದ ವಿರುದ್ಧ ಮುಗಿ ಬೀಳಲು ವಿಪಕ್ಷಗಳು ಸಜ್ಜಾಗಿವೆ.

Key words: Start –session- Condolences –death-elite.