Wednesday, September 30, 2026

BDA Apartments

ಟಿವಿಯಲ್ಲಿ ಮಹಾ ಭಾರತ ಮತ್ತೆ ನೋಡುವ ಅವಕಾಶ ಕಲ್ಪಿಸಿದ ಸ್ಟಾರ್ ಸುವರ್ಣ BDA JK_Adv BDA Adv
Home Cinema ಟಿವಿಯಲ್ಲಿ ಮಹಾ ಭಾರತ ಮತ್ತೆ ನೋಡುವ ಅವಕಾಶ ಕಲ್ಪಿಸಿದ ಸ್ಟಾರ್ ಸುವರ್ಣ

ಟಿವಿಯಲ್ಲಿ ಮಹಾ ಭಾರತ ಮತ್ತೆ ನೋಡುವ ಅವಕಾಶ ಕಲ್ಪಿಸಿದ ಸ್ಟಾರ್ ಸುವರ್ಣ

ಬೆಂಗಳೂರು, ಮೇ 13, 2021 (www.justkannada.in): ಸ್ಟಾರ್ ಸುವರ್ಣ ವಾಹಿನಿ ಮತ್ತೆ ಮಹಾ ಭಾರತ ಧಾರಾವಾಹಿ ಪ್ರಸಾರ ಮಾಡುವ ನಿರ್ಧಾರ ಮಾಡಿದೆ.

ಸದ್ಯ ವಾಹಿನಿ ಹೇಳಿರುವ ಪ್ರಕಾರ ಪ್ರತಿ ಶನಿವಾರ ಹಾಗೂ ಭಾನುವಾರ ಸಂಜೆ 6 ರಿಂದ 8.30ರ ತನಕ ಮಹಾಭಾರತ ಮರುಪ್ರಸಾರ ಮಾಡಲು ಸ್ಟಾರ್ ಸುವರ್ಣ ಟೀಂ ನಿರ್ಧರಿಸಿದೆ.

ಇತರೆ ಚಾನೆಲ್ ಗಳ ಆರ್ಭಟದಲ್ಲಿ ಮಂಕಾಗಿದ್ದ ಸ್ಟಾರ್ ಸುವರ್ಣ ವಾಹಿನಿಗೆ ಮಹಾಭಾರತ ಸಂಜೀವಿನಿಯಾಗಿತ್ತು. ಕಳೆದ ಲಾಕ್ ಡೌನ್ ಅವಧಿ ಹಾಗೂ ನಂತರದ ದಿನಗಳಲ್ಲಿ ಡಬ್ ಮಹಾಭಾರತವನ್ನು ಜನ ಮೆಚ್ಚಿದ್ದರು.

ಇದೀಗ ಮತ್ತೆ ಈ ಧಾರವಾಹಿ ಮರುಪ್ರಸಾರಕ್ಕೆ ವೀಕ್ಷಕರು ಒತ್ತಾಯಿಸಿದ್ದರು. ಇದಕ್ಕೆ ಮನ್ನಣೆ ನೀಡಿರುವ ವಾಹಿನಿ ಟೀಂ ಮರು ಪ್ರಸಾರ ಮಾಡಲು ತೀರ್ಮಾನಿಸಿದೆ.