ಪ್ರೇಯಸಿಯ ಮೇಲೆ ಭಗ್ನಪ್ರೇಮಿಯಿಂದ ಚಾಕು ಇರಿತ…

ಮೈಸೂರು,ಏಪ್ರಿಲ್,23,2021(www.justkannada.in): ಭಗ್ನ ಪ್ರೇಮಿಯೊಬ್ಬ ಪ್ರೇಯಸಿಯ ನಡತೆ ಪ್ರಶ್ನಿಸಿ ಚಾಕು ಇರಿದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.jk

ಹಾಡುಹಗಲೇ ಪ್ರೇಯಸಿಯ ಮುಖಕ್ಕೆ ಚಾಕುವಿನಿಂದ ಇರಿದು ಕೊಲೆಗೆ  ಯತ್ನಿಸಿರುವ ಘಟನೆ ಮೈಸೂರಿನ ಹರ್ಷ ರಸ್ತೆಯಲ್ಲಿ  ನಡೆದಿದೆ.  ನಂಜನಗೂಡಿನ ಶ್ರೀರಾಂಪುರದ ಸೌಮ್ಯ(೨೪) ಹಲ್ಲೆಗೊಳಗಾದ ಯುವತಿ. ಹೆಚ್.ಡಿ.ಕೋಟೆ ತಾಲೂಕು ಅಂತರಸಂತೆಯ ರಮೇಶ್ ಎಂಬಾತನೇ ಈ ಕೃತ್ಯವೆಸಗಿದ್ದಾನೆ.

ಕಳೆದ ನಾಲ್ಕು ವರ್ಷದಿಂದ ರಮೇಶ್ ಮತ್ತು ಸೌಮ್ಯ ಪರಸ್ಪರ ಪ್ರೀತಿಸುತ್ತಿದ್ದರು. ಸೌಮ್ಯ ಮೈಸೂರಿನ ಖಾಸಗಿ ಮಾಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದು, ರಮೇಶ್ ಸೌಮ್ಯ ಮೊಬೈಲ್ ಹ್ಯಾಕ್ ಮಾಡಿದ್ದ. ಸೌಮ್ಯಾಳಿಗೆ ಬರುತ್ತಿದ್ದ ಮೆಸೇಜ್ ಗಳನ್ನ ತನ್ನ ಮೊಬೈಲ್ ಗೆ ಬರುವಂತೆ ಮಾಡಿದ್ದನು. ಈ ನಡುವೆ ಸೌಮ್ಯ ಕೆಲವು ಯುವಕರ ಜೊತೆ ಚಾಟ್ ಮಾಡಿದ್ದಳು ಎನ್ನಲಾಗಿದೆ.stabbing-knife-girlfriend-mysore

ಚಾಟ್ ಗಳನ್ನ ನೋಡಿ  ತಿರುಗಿ ಬಿದ್ದ ರಮೇಶ್ ನಡತೆ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದನು.   ಇದರಿಂದ ಲವ್ ಗೆ ಬ್ರೇಕ್ ಬಿದ್ದಿದ್ದು, ಮಾತುಕತೆ ನಡೆಸುವುದಾಗಿ ಕರೆಸಿ ರಮೇಶ್ ಸೌಮ್ಯಳ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಸೌಮ್ಯಳ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಭಗ್ನಪ್ರೇಮಿ ರಮೇಶ್ನನ್ನ ಪೊಲೀಸರು ವಶಕ್ಕೆ ಪಡೆದಿದ್ದು, ಲಷ್ಕರ್ ಮೊಹಲ್ಲಾ ಠಾಣೆಯಲ್ಲಿ ಆರೋಪಿ ವಿಚಾರಣೆ ಮಾಡಲಾಗುತ್ತಿದೆ.

Key words: stabbing -knife – girlfriend-mysore