Friday, September 25, 2026

BDA Apartments

Home Front Page ಎಸ್ ಟಿ ನಿಗಮ ಅಕ್ರಮ ಕೇಸ್ ನಲ್ಲಿ ಮತ್ತೊಬ್ಬ ಸಚಿವರ ಹೆಸರು : ಅವರು ಅಪ್ಪಟ...

ಎಸ್ ಟಿ ನಿಗಮ ಅಕ್ರಮ ಕೇಸ್ ನಲ್ಲಿ ಮತ್ತೊಬ್ಬ ಸಚಿವರ ಹೆಸರು : ಅವರು ಅಪ್ಪಟ ಪ್ರಾಮಾಣಿಕ ವ್ಯಕ್ತಿ ಎಂದ  ಸಚಿವ ಎಂ.ಬಿ ಪಾಟೀಲ್

ವಿಜಯಪುರ,ಜೂನ್,8,2024 (www.justkannada.in):  ಎಸ್ .ಟಿ ಅಭಿವೃದ್ದಿ ನಿಗಮದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಚಿವ ಶರಣಪ್ರಕಾಶ್ ಪಾಟೀಲ್ ಹೆಸರು ಕೇಳಿ ಬಂದಿದ್ದು ಈ ಕುರಿತು ಬೃಹತ್ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಎಂ.ಬಿ ಪಾಟೀಲ್, ಸಚಿವ ಶರಣ ಪ್ರಕಾಶ್ ಪಾಟಿಲ್ ಒಬ್ಬ ಅಪ್ಪಟ ಪ್ರಾಮಾಣಿಕ ವ್ಯಕ್ತಿ.  ಈ ಮಾತನ್ನ ಬಹಳ ಗರ್ವದಿಂದ ಹೇಳುತ್ತೇನೆ. ಸಾಕ್ಷ್ಯ ನಾಶ ಮಾಡುವಂತಹ ಕೆಲಸಕ್ಕೆ ಅವರು ಹೋಗಲ್ಲ. ದಯವಿಟ್ಟು ಶರಣ ಪ್ರಕಾಶ್  ಪಾಟೀಲ್ ಹೆಸರು ತಳಕು ಹಾಕಬೇಡಿ ಎಂದು ಮನವಿ ಮಾಡಿದರು.ಎಸ್ ಟಿ ನಿಗಮ ಅಕ್ರಮ ಕೇಸ್ ನಲ್ಲಿ ಮತ್ತೊಬ್ಬ ಸಚಿವರ ಹೆಸರು mbpatil

ವಾಲ್ಮೀಕಿ ಅಭಿವೃದ್ದಿ ನಿಗದಮ ಎಂಡಿ ಒಬ್ಬ ಫ್ರಾಡ್ . ಶರಣ ಪ್ರಕಾಶ್ ಪಾಟೀಲ್ ಪ್ರಮಾಣಿಕ ವ್ಯಕ್ತಿ ಸಾಕ್ಷಾನಾಶ  ಭ್ರಷ್ಟಾಚಾರ ಮಾಡಿಲ್ಲ ಎಂದರು.

Key words: ST Corporation –illegal- case-Minister- MB Patil