ಎಸ್ ಎಸ್ಎಲ್ ಸಿ ಹಾಗೂ ದ್ವಿತೀಯ ಪಿಯು ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ.

ಬೆಂಗಳೂರು, ಡಿಸೆಂಬರ್, 1,2023(www.justkannada.in):   ಎಸ್​ ಎಸ್​ ಎಲ್​ ಸಿ  ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಿಸಿದೆ.

2024 ಮಾರ್ಚ್​ 02 ರಿಂದ ಮಾರ್ಚ್​ 22ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದೆ. ಇನ್ನು ಮಾರ್ಚ್​ 25 ರಿಂದ ಏಪ್ರಿಲ್​​ 06 ರವರೆಗೆ ಎಸ್ಎಸ್ಎಲ್ ಸಿ ವಾರ್ಷಿಕ ಪರೀಕ್ಷೆ ನಡೆಯಲಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ  ಮೂರು ತಿಂಗಳ ಮುಂಚಿತವಾಗಿಯೇ ತಾತ್ಕಲಿಕ ವೇಳಾಪಟ್ಟಿ ಪ್ರಕಟ ಮಾಡಿದೆ.

ಎಸ್.ಎಸ್.ಎಲ್.ಸಿ.ಮತ್ತು ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆ-1 ರ ತಾತ್ಕಾಲಿಕ ವೇಳಾಪಟ್ಟಿಗೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು ಡಿಸೆಂಬರ್‌ 15ರವರೆಗೆ ಕಾಲಾವಕಾಶವನ್ನು ನೀಡಲಾಗಿದೆ.

ಎಸ್‍ಎಸ್‍ಎಲ್‍ಸಿ ತಾತ್ಕಾಲಿಕ ವೇಳಾಪಟ್ಟಿ ಹೀಗಿದೆ..

ದಿನಾಂಕ ಪರೀಕ್ಷೆ
ಮಾರ್ಚ್- 25 ಪ್ರಥಮ ಭಾಷೆ (ಕನ್ನಡ)
ಮಾರ್ಚ್- 27 ಸಮಾಜ ವಿಜ್ಞಾನ
ಮಾರ್ಚ್- 30 ವಿಜ್ಞಾನ
ಏಪ್ರಿಲ್ – 02 ಗಣಿತ
ಏಪ್ರಿಲ್ – 04  ಹಿಂದಿ
ಏಪ್ರಿಲ್ – 06 ಇಂಗ್ಲಿಷ್

ದ್ವಿತೀಯ ಪಿಯುಸಿ ತಾತ್ಕಾಲಿಕ ವೇಳಾಪಟ್ಟಿ ಹೀಗಿದೆ.

ದಿನಾಂಕ ಪರೀಕ್ಷೆ
ಮಾರ್ಚ್- 0 2 ಕನ್ನಡ, ಅರೇಬಿಕ್
ಮಾರ್ಚ್- 0 4 ಇತಿಹಾಸ, ಭೌತಶಾಸ್ತ್ರ
ಮಾರ್ಚ್- 0 5 ಮಾಹಿತಿ ತಂತ್ರಜ್ಞಾನ, ರೀಟೈಲ್, ಹೆಲ್ತ್ ಕೇರ್
ಮಾರ್ಚ್- 0 6 ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ
ಮಾರ್ಚ್- 0 7 ಹಿಂದಿ
ಮಾರ್ಚ್- 0 9 ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
ಮಾರ್ಚ್ -11 ಇಂಗ್ಲಿಷ್
ಮಾರ್ಚ್ – 12 ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
ಮಾರ್ಚ್- 13 ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ
ಮಾರ್ಚ್ – 14 ಗಣಿತ, ಶಿಕ್ಷಣಶಾಸ್ತ್ರ
ಮಾರ್ಚ್ – 16 ಭೂಗೋಳಶಾಸ್ತ್ರ, ಜೀವಶಾಸ್ತ್ರ
ಮಾರ್ಚ್- 18 ರಸಾಯನಶಾಸ್ತ್ರ, ಮನಃಶಾಸ್ತ್ರ,ಮೂಲಗಣಿತ, ಹಿಂದೂಸ್ಥಾನಿ ಸಂಗೀತ
ಮಾರ್ಚ್ -20 ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ,ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ
ಮಾರ್ಚ್- 22 ಅರ್ಥಶಾಸ್ತ್ರ

 

Key words: SSLC – Second PU -Provisional –Timetable- published.