Tuesday, September 29, 2026

BDA Apartments

ಶ್ರೀ ರಾಮನವಮಿ : ಮಾ.28ರಂದು ಮಕ್ಕಳಿಗೆ ಶ್ರೀ ರಾಮ ಹಾಗೂ ಸೀತೆ ವೇಷಭೂಷಣ ಸ್ಪರ್ಧೆ ...
Home Front Page ಶ್ರೀ ರಾಮನವಮಿ : ಮಾ.28ರಂದು ಮಕ್ಕಳಿಗೆ ಶ್ರೀ ರಾಮ ಹಾಗೂ ಸೀತೆ ವೇಷಭೂಷಣ ಸ್ಪರ್ಧೆ

ಶ್ರೀ ರಾಮನವಮಿ : ಮಾ.28ರಂದು ಮಕ್ಕಳಿಗೆ ಶ್ರೀ ರಾಮ ಹಾಗೂ ಸೀತೆ ವೇಷಭೂಷಣ ಸ್ಪರ್ಧೆ

ಮೈಸೂರು,ಮಾರ್ಚ್,26,2026 (www.justkannada.in): ಕಲಾ  ಉತ್ಸವ ಟ್ರಸ್ಟ್ ಮೈಸೂರು ಹಾಗೂ ಶ್ರೀ ಮಹಾಜನಾ ಸಭಾ ಟ್ರಸ್ಟ್ ಶ್ರೀರಾಮ ಮಂದಿರ ವತಿಯಿಂದ ಶ್ರೀ ರಾಮನವಮಿ ಅಂಗವಾಗಿ 8 ವರ್ಷದ ಒಳಗಿನ ಮಕ್ಕಳಿಗೆ ಶ್ರೀ ರಾಮ ಹಾಗೂ ಸೀತೆ ವೇಷಭೂಷಣ ಸ್ಪರ್ಧೆಯನ್ನು ಮಾರ್ಚ್ 28ರಂದು ಏರ್ಪಡಿಸಲಾಗಿದೆ.

ಅಂದು ಬೆಳಗ್ಗೆ 11.30 ಕ್ಕೆ ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಶ್ರೀರಾಮ ಮಂದಿರದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು ಅದರ ಪ್ರಚಾರ ಸಾಮಗ್ರಿಗಳನ್ನು ಯೋಗ ನರಸಿಂಹಸ್ವಾಮಿ ದೇವಸ್ಥಾನದ ಸಂಸ್ಥಾಪಕ ನಾಡೋಜ ಪುರಸ್ಕೃತ ಡಾ. ಭಾಷ್ಯಂ ಸ್ವಾಮೀಜಿ ಅವರು ವಿಜಯನಗರದಲ್ಲಿರುವ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಿ ಶುಭ ಕೋರಿ ಮಾತನಾಡಿದರು.

ಶ್ರೀರಾಮಚಂದ್ರನು ವನವಾಸಕ್ಕೆ ತೆರಳಿದಾಗ ಪತ್ನಿ ಸೀತಾಮಾತೆಯೂ ಕೂಡ ಜೊತೆಯಾಗಿ ಹೋಗುವ ಸನ್ನಿವೇಶ ಎಲ್ಲ ದಂಪತಿಗೆ ಅನೋನ್ಯತೆ ಸಂದೇಶದ ಆದರ್ಶವಾಗಿದೆ. ಜೀವನದಲ್ಲಿ ಎಷ್ಟೇ ಕಷ್ಟ ಬಂದಾಗಲೂ ಪತಿ- ಪತ್ನಿ ಕೈಜೋಡಿಸಿ ಸಂಸಾರದ ನೌಕೆ ಸಾಗಿಸಬೇಕು ಎಂಬ ಅಮೂಲ್ಯ ಸಂದೇಶ ಅದು ಸಾರುತ್ತದೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಕಾಲ  ಉತ್ಸವ ಟ್ರಸ್ಟ್ ಮೈಸೂರು ಅಧ್ಯಕ್ಷ ಅಮಿತ್ ಮಾತನಾಡಿ 8 ವರ್ಷದ ಮಕ್ಕಳು ಶ್ರೀರಾಮ ಹಾಗೂ ಸೀತೆ ವೇಷಭೂಷಣ ಸ್ಪರ್ಧೆಯಲ್ಲಿ ಭಾಗವಹಿಸಬಹುದು ಪ್ರವೇಶ ಉಚಿತವಾಗಿರುತ್ತದೆ ಮಾಹಿತಿಗಾಗಿ 9880752727/ 7996021665 ಸಂಪರ್ಕಿಸಿ ನೋಂದಾಯಿಸಿಕೊಳ್ಳಬಹುದು

ಈ  ವೇಳೆ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಕೆ ಬಿ ಲಿಂಗರಾಜು, ಶೇಷಾದ್ರಿ, ಜೀವಧಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕೆಎಂಪಿ ಕೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ನಿರೂಪಕ ಅಜಯ್ ಶಾಸ್ತ್ರಿ, ಅಮಿತ್, ಬಾಲಜಿ, ಶ್ರೀಧರ್ ಹಾಗೂ ಇನ್ನಿತರರು ಹಾಜರಿದ್ದರು.

Key words: Sri RamNavami,  Sri Rama and Seetha, costume, competition, Mysore