ಸೆ.18ರಿಂದ ಐದು ದಿನಗಳ ಕಾಲ ಸಂಸತ್ ವಿಶೇಷ ಅಧಿವೇಶನ.

ನವದೆಹಲಿ,ಆಗಸ್ಟ್,31,2023(www.justkannada.in): ಕೇಂದ್ರ ಸರ್ಕಾರ  ಐದು ದಿನಗಳ ಕಾಲ ಸಂಸತ್ ವಿಶೇಷ ಅಧಿವೇಶನವನ್ನ ಕರೆದಿದೆ.

ಈ ಕುರಿತು ಟ್ವೀಟ್ ಮಾಡಿ ಮಾಹಿತಿ ನೀಡಿದ ಕೇಂದ್ರಸಚಿವ ಪ್ರಹ್ಲಾದ್ ಜೋಶಿ,  ಸೆಪ್ಟೆಂಬರ್ 18 ರಿಂದ 22 ರವರೆಗೆ ಸಂಸತ್ ವಿಶೇಷ ಅಧಿವೇಶನ ನಡೆಯಲಿದೆ ಎಂದು ತಿಳಿಸಿದ್ದಾರೆ. ಇನ್ನು ಇದರಲ್ಲಿ 5 ಸಭೆಗಳು ನಡೆಯಲಿದ್ದು, ಹೊಸ ಸಂಸತ್ತಿನಲ್ಲಿ ವಿಶೇಷ ಅಧಿವೇಶನ ನಡೆಯಲಿದೆ.

ಮೂಲಗಳ ಪ್ರಕಾರ, ಈ ಅಧಿವೇಶನದಲ್ಲಿ 10ಕ್ಕೂ ಹೆಚ್ಚು ಪ್ರಮುಖ ಮಸೂದೆಗಳನ್ನ ಪರಿಚಯಿಸಲಾಗುವುದು. ಮಸೂದೆಯಿಂದಾಗಿ, ವಿಶೇಷ ಅಧಿವೇಶನವನ್ನ ಕರೆಯಲಾಗುತ್ತಿದೆ. ಅಮೃತಕಾಲದ ನಡುವೆ ಸಂಸತ್ತಿನಲ್ಲಿ ಅರ್ಥಪೂರ್ಣ ಚರ್ಚೆಗಾಗಿ ನಾನು ಕಾಯುತ್ತಿದ್ದೇನೆ ಎಂದು ಪ್ರಹ್ಲಾದ್ ಜೋಶಿ  ತಿಳಿಸಿದ್ದಾರೆ. .  ಹೊಸ ಸಂಸತ್ ಕಟ್ಟಡದಲ್ಲಿ ಅಧಿವೇಶನ ನಡೆಯುವ ಸಾಧ್ಯತೆ ಇದೆ.

Key words: Special session – Parliament – five days – September 18.