ಪುಸ್ತಕ ಪ್ರಿಯರಿಗೆ ಒಂದು ವಿಶೇಷ ಸುದ್ಧಿ: ರಸಪ್ರಶ್ನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ, ಆಕರ್ಷಕ ಬಹುಮಾನ ಗೆಲ್ಲಿ..

ಬೆಂಗಳೂರು,ಜೂನ್,27,2023(www.justkannada.in): 77ನೇ ಸ್ವಾತಂತ್ರೋತ್ಸವದ ಅಂಗವಾಗಿ aravathnalku64 ಚಾನೆಲ್ ವತಿಯಿಂದ ರಸಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಚಾನೆಲ್ ನಲ್ಲಿ ಹಲವಾರು ಕನ್ನಡ ಹಾಗೂ ಕನ್ನಡಕ್ಕೆ ಭಾಷಾಂತರಿಸಲಾದ ಪುಸ್ತಕಗಳ ಪರಿಚಯ ಮಾಡಲಾಗಿದೆ. ಪ್ರಶ್ನೆಗಳು ಚಾನೆಲ್ ನಲ್ಲಿಇರುವ ಪುಸ್ತಕ ಪರಿಚಯದ ವಿಡಿಯೋಗಳಿಂದ ಆಯ್ದುಕೊಳ್ಳಲಾಗುತ್ತದೆ.

ಕಾರ್ಯಕ್ರಮವು ಜುಲೈ 3ರಿಂದ ಜುಲೈ31ರ ತನಕ  ನಡೆಯಲಿದೆ. ಪ್ರತಿ ಸೋಮವಾರ ಬಿಡುಗಡೆಯಾಗುವ ಪುಸ್ತಕ ಪರಿಚಯ ವಿಡಿಯೋದೊಂದಿಗೆ 2 ಪ್ರಶ್ನೆಗಳನ್ನು ಕೇಳಲಾಗುವುದು. ನಿಯಮಗಳನ್ನು aravathnalku64 ರ ಇನ್ಸ್ಟಾಗ್ರಾಮ್ ಹಾಗೂ ಟ್ವಿಟ್ಟರ್ ಅಕೌಂಟ್ ನಲ್ಲಿ ಪ್ರಕಟಿಸಲಾಗುವುದು.  ಉತ್ತರಿಸಲು aravathnalku64  ಚಾನೆಲ್ ಗೆ ಸಬ್ ಸ್ಕ್ರೈಬ್ ಆಗಿ ಹಾಗೂ ಇನ್ಸ್ಟಾಗ್ರಾಮ್, ಟ್ವಿಟ್ಟರ್ ಅಕೌಂಟ್ (@aravathnalku64) ಕೂಡ ಹಿಂಬಾಲಿಸಿ.

ರಸಪ್ರಶ್ನೆ ಕಾರ್ಯಕ್ರಮದ ವಿಜೇತರಿಗೆ ಪುಸ್ತಕ ಬಹುಮಾನ ಹಾಗೂ ಆಯ್ದ ಸ್ಪರ್ಧಿಗಳಿಗೆ ಮೇಧಾವಿ ಸೂಪರ್ಫುಡ್ಸ್ ಕಡೆಯಿಂದ ಒಂದು ಗಿಫ್ಟ್  ಇದೆ. ಸರಿಯಾದ ಉತ್ತರ ನೀಡಿ ಬಹುಮಾನ ಗೆಲ್ಲಿ.

aravathnalku64 ಕನ್ನಡಿಗರಿಂದ ಕನ್ನಡಿಗರಿಗಾಗಿ ಹುಟ್ಟಿಕೊಂಡ ಯುಟ್ಯೂಬ್ ಚಾನೆಲ್. ಪುಸ್ತಕ ಪರಿಚಯದಿಂದ ಹಿಡಿದು ಮಾಹಿತಿ ತಂತ್ರಜ್ಞಾನ ವಿಷಯಗಳನ್ನು ಕನ್ನಡದಲ್ಲಿ ಜನಸಾಮಾನ್ಯರಿಗೆ ಅರ್ಥವಾಗುವಂತೆ ತಲುಪಿಸುವುದು ಈಚಾನೆಲ್ ನ ಉದ್ದೇಶ. ಇದಕ್ಕೆ ನಿಮ್ಮೆಲ್ಲರ ಸಹಕಾರ, ಬೆಂಬಲ ಸದಾ ಇರಲಿ.

ಯುಟ್ಯೂಬ್ :https://www.youtube.com/@AravathNalku64/about

ಇನ್ಸ್ಟಾಗ್ರಾಮ್/ಟ್ವಿಟ್ಟರ್ :  @AravathNalku64

ಈ-ಮೇಲ್ : aravathnalku64@gmail.com

Key words:  special news – book- lovers- quiz program- aravathnalku64