ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ: ಪರಿಷ್ಕೃತ ದಿನಾಂಕ ಪ್ರಕಟ.

ಮೈಸೂರು,ಡಿಸೆಂಬರ್,27,2023(www.justkannada.in): ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ 2024ಕ್ಕೆ ಸಂಬಂಧಿಸಿದಂತೆ ಭಾರತ ಚುನಾವಣಾ ಆಯೋಗವು  ಪರಿಷ್ಕೃತ ವೇಳಾ ಪಟ್ಟಿಯನ್ನು ಹೊರಡಿಸಿದೆ ಎಂದು ಅಪರ  ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಕ್ಕು ಮತ್ತು ಆಕ್ಷೇಪಣೆ ಇತ್ಯರ್ಥ ಪಡಿಸುವ ದಿನಾಂಕವನ್ನು ಜನವರಿ 12ಕ್ಕೆ , ದತ್ತಾಂಶಗಳನ್ನು ಸಂಗ್ರಹಿಸಿ ಮತ್ತು ಪರಿಶೀಲಿಸುವ ದಿನಾಂಕವನ್ನು ಜನವರಿ 17ಕ್ಕೆ ಹಾಗೂ  ಅಂತಿಮ ಮತದಾರರ ಪಟ್ಟಿಯನ್ನು ಜನವರಿ 22ಕ್ಕೆ ಪರಿಷ್ಕೃತ ವೇಳಪಟ್ಟಿಯಲ್ಲಿ  ನಿಗದಿಪಡಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Key words: Special- Electoral Roll –Revision-Revised -Date -Announced