Saturday, September 5, 2026

BDA Apartments

Home Front Page ವಿನಯ್ ಕುಲಕರ್ಣಿ ಶಾಸಕ ಸ್ಥಾನ ರದ್ದು ಮಾಡುವ ಬಗ್ಗೆ ಯಾವುದೇ ಆಧಿಕೃತ ಮಾಹಿತಿ ಬಂದಿಲ್ಲ- ಸ್ಪೀಕರ್...

ವಿನಯ್ ಕುಲಕರ್ಣಿ ಶಾಸಕ ಸ್ಥಾನ ರದ್ದು ಮಾಡುವ ಬಗ್ಗೆ ಯಾವುದೇ ಆಧಿಕೃತ ಮಾಹಿತಿ ಬಂದಿಲ್ಲ- ಸ್ಪೀಕರ್ ಯುಟಿ ಖಾದರ್

ಮಂಗಳೂರು,ಏಪ್ರಿಲ್,20,2026 (www.justkannada.in):  ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ವಿನಯ್ ಕುಲಕರ್ಣಿಯ ಶಾಸಕ ಸ್ಥಾನ ರದ್ದು ಮಾಡುವ ವಿಚಾರ ಸಂಬಂಧ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಎಂದು ಸ್ಪೀಕರ್ ಯುಟಿ ಖಾದರ್ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಸ್ಪೀಕರ್ ಯುಟಿ ಖಾದರ್, ಕೋರ್ಟ್ ನಿಂದ ಅಧಿಕೃತ ಮಾಹಿತಿ ಬಂದ ಬಳಿಕ ವಿನಯ್ ಕುಲಕರ್ಣಿಯ ಶಾಸಕ ಸ್ಥಾನ ರದ್ದು ಕುರಿತು ತೀರ್ಮಾನ ಮಾಡಲಾಗುತ್ತದೆ.  ಆದೇಶಕ್ಕೆ  ತಡೆಯಾಜ್ಞೆ ಆದರೆ ಮುಂದುವರೆಯುವ ಅವಕಾಶವಿರುತ್ತೆ ಎಂದರು.

ತಾವು ಸಿಎಂ ಸ್ಥಾನದ ಆಕಾಂಕ್ಷಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸ್ಪೀಕರ್ ಯುಟಿ ಖಾದರ್, ಇನ್ನೂ  20 ವರ್ಷದ ಬಳಿಕ ಸಿಎಂ ಸ್ಥಾನದ ಬಗ್ಗೆ ಮಾತನಾಡುತ್ತೇನೆ. ಮುಂದಿನ 4 ಅವಧಿಗೂ ಕ್ಷೇತ್ರದಲ್ಲಿ ನನಗೆ ಟಿಕೆಟ್ ಕೊಟ್ಟರೆ ಅ 4 ಅವಧಿಯಲ್ಲೂ ಚುನಾವಣೆಯಲ್ಲಿ ಜನ ನನ್ನನ್ನು  ಗೆಲ್ಲಿಸಿದರೆ ಆ ನಂತರ ಸಿಎಂ ಹುದ್ದೆ ವಿಚಾರವಾಗಿ ಯೋಚನೆ ಮಾಡುತ್ತೇನೆ ಎಂದರು.

ಸಂಪುಟ ಪುನಾರಚನೆ ಬಗ್ಗೆ ನನಗೆ ಮಾಹಿತಿ ಇಲ್ಲ ನನಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ ನಡೆದಿರೋದು ಗೊತ್ತಿಲ್ಲ ಮುಸ್ಲೀಂ ಸಮುದಾಯ  ನಿರ್ಲಕ್ಷ್ಯದ ಬಗ್ಗೆ ಪಕ್ಷದ ನಾಯಕರು ಮಾತನಾಡುತ್ತಾರೆ ಎಂದರು.

Key words: No official information, cancellation, Vinay Kulkarni,  MLA seat, Speaker, UT Khader