ಅಧಿವೇಶನ ವಿಸ್ತರಿಸುವ ಬಗ್ಗೆ ಚರ್ಚಿಸಿ ತೀರ್ಮಾನ- ಸ್ಪೀಕರ್ ಯು.ಟಿ ಖಾದರ್

ಬೆಳಗಾವಿ,ಡಿಸೆಂಬರ್,16,2025 (www.justkannada.in):  ವಿಧಾನಮಂಡಲ ಚಳಿಗಾಲದ ಅಧಿವೇಶನ ಒಂದು ವಾರ ವಿಸ್ತರಿಸುವಂತೆ ವಿಪಕ್ಷ ನಾಯಕ ಆರ್.ಅಶೋಕ್ ಪತ್ರ ಬರೆದ ಹಿನ್ನೆಲೆಯಲ್ಲಿ ಈ ಕುರಿತು ವಿಧಾನಸಭೆ ಸ್ಫೀಕರ್ ಯು.ಟಿ ಖಾದರ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸ್ಪೀಕರ್ ಯು.ಟಿ ಖಾದರ್, ಅಧಿವೇಶನವನ್ನು ವಿಸ್ತರಿಸುವಂತೆ ಪತ್ರ ಬಂದಿದೆ. ವಿಸ್ತರಣೆ ಮಾಡಬೇಕೋ? ಬೇಡವೋ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ.  ಈ ಬಗ್ಗೆ ಸಿಎಂ  ಸಿದ್ದರಾಮಯ್ಯ ಜತೆ ಚರ್ಚೆ ಮಾಡುತ್ತೇನೆ ಎಂದರು.

ತೀರಾ ಏನೂ ಸಮಯ ವ್ಯರ್ಥ ಆಗಿಲ್ಲ.  ನಿನ್ನೆಯ ಅಧೀವೇಶನದ 8 ಗಂಟೆ ಮಾತ್ರ ಸರಿದೂಗಿಸಬೇಕಿದೆ ಎಂದು ಸ್ಪೀಕರ್ ಯು.ಟಿ ಖಾದರ್ ತಿಳಿಸಿದರು.

Key words: extend, session, discussion, Speaker, UT Khader