ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಮಹಿಳಾ ವಾಲಿಬಾಲ್: ಮೈವಿವಿ ತಂಡ ಆಯ್ಕೆ ಮೈಸೂರು: ತಮಿಳನಾಡಿನ ಚೆನ್ನೈ ಎಸ್‌ಆರ್‌ಎಂ ವಿಶ್ವವಿದ್ಯಾಲಯದಲ್ಲಿ ಡಿ.13 ರಿಂದ 16ರವರೆಗೆ ನಡೆಯಲಿರುವ 2021-22ನೇ ಸಾಲಿನ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಮಹಿಳಾ ವಾಲಿಬಾಲ್ ಪಂದ್ಯಾವಳಿಗೆ ಮೈಸೂರು ವಿವಿ ತಂಡವನ್ನು ಆಯ್ಕೆ ಮಾಡಲಾಗಿದೆ. ವಿವಿಯ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಸ್ಪೋರ್ಟ್ಸ್ ಪೆವಿಲಿಯನ್ ಮೈದಾನದಲ್ಲಿ ಇತ್ತೀಚೆಗೆ ತಂಡದ ಆಯ್ಕೆ ಪ್ರಕ್ರಿಯೆ ನಡೆದಿದೆ. ಯುವರಾಜ ಕಾಲೇಜಿನ ಕೆ.ನಿಶಾ(ನಾಯಕಿ), ಸಿದ್ದಾರ್ಥನಗರದ ಸರ್ಕಾರಿ ಕಾಲೇಜಿನ ಎನ್.ದೀಪ್ತಿ, ಸಿ.ಕಾವ್ಯಾ, ಲಾವಣ್ಯ, ಸ್ನೇಹಾಮೊರ್ಬ, ಅರ್ಪಿತಾ, ಕೆ.ಜಿ. ನಿತ್ಯಾ, ವಿದ್ಯಾವಿಕಾಸ ಕಾಲೇಜಿನ ಬಿ.ಪಿ.ಹೇಮಾ, ಪಿ.ಎಚ್.ನಿತ್ಯಾ, ಮಾನಸ ಗಂಗೋತ್ರಿ ಸ್ನಾತಕೋತ್ತರ ಮಂಡಳಿಯ ವರ್ಷಿಣಿ, ಟೆರೇಷಿಯನ್ ಕಾಲೇಜಿನ ನಿವೇದಿತಾ ತಮ್ಮ ಸಾಮರ್ಥ್ಯವನ್ನು ಸಾದರ ಪಡಿಸಿ ಮೈಸೂರು ವಿವಿ ವಾಲಿವಾಲ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ತರಬೇತುದಾರ ಎಲ್.ಲೋಹಿತ್, ತಂಡದ ವ್ಯವಸ್ಥಾಪಕ ಡಾ.ಉದಯಕುಮಾರ್ ಜತೆ ತಮ್ಮ ತಂಡ ಚೆನ್ನೈ ವಿಶ್ವವಿದ್ಯಾಲಯಕ್ಕೆ ಪ್ರಯಾಣ ಬೆಳೆಸಿದೆ ಎಂದು ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಪಿ.ಕೃಷ್ಣಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೈಸೂರು, ಡಿಸೆಂಬರ್ 12, 2021 (www.justkannada.in): ತಮಿಳನಾಡಿನ ಚೆನ್ನೈ ಎಸ್‌ಆರ್‌ಎಂ ವಿಶ್ವವಿದ್ಯಾಲಯದಲ್ಲಿ ಡಿ.13 ರಿಂದ 16ರವರೆಗೆ ನಡೆಯಲಿರುವ 2021-22ನೇ ಸಾಲಿನ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಮಹಿಳಾ ವಾಲಿಬಾಲ್ ಪಂದ್ಯಾವಳಿಗೆ ಮೈಸೂರು ವಿವಿ ತಂಡವನ್ನು ಆಯ್ಕೆ ಮಾಡಲಾಗಿದೆ.

ವಿವಿಯ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಸ್ಪೋರ್ಟ್ಸ್ ಪೆವಿಲಿಯನ್ ಮೈದಾನದಲ್ಲಿ ಇತ್ತೀಚೆಗೆ ತಂಡದ ಆಯ್ಕೆ ಪ್ರಕ್ರಿಯೆ ನಡೆದಿದೆ.

ಯುವರಾಜ ಕಾಲೇಜಿನ ಕೆ.ನಿಶಾ(ನಾಯಕಿ), ಸಿದ್ದಾರ್ಥನಗರದ ಸರ್ಕಾರಿ ಕಾಲೇಜಿನ ಎನ್.ದೀಪ್ತಿ, ಸಿ.ಕಾವ್ಯಾ, ಲಾವಣ್ಯ, ಸ್ನೇಹಾಮೊರ್ಬ, ಅರ್ಪಿತಾ, ಕೆ.ಜಿ. ನಿತ್ಯಾ, ವಿದ್ಯಾವಿಕಾಸ ಕಾಲೇಜಿನ ಬಿ.ಪಿ.ಹೇಮಾ, ಪಿ.ಎಚ್.ನಿತ್ಯಾ, ಮಾನಸ ಗಂಗೋತ್ರಿ ಸ್ನಾತಕೋತ್ತರ ಮಂಡಳಿಯ ವರ್ಷಿಣಿ, ಟೆರೇಷಿಯನ್ ಕಾಲೇಜಿನ ನಿವೇದಿತಾ ತಮ್ಮ ಸಾಮರ್ಥ್ಯವನ್ನು ಸಾದರ ಪಡಿಸಿ ಮೈಸೂರು ವಿವಿ ವಾಲಿವಾಲ್ ತಂಡಕ್ಕೆ ಆಯ್ಕೆಯಾಗಿದ್ದಾರೆ.

ತರಬೇತುದಾರ ಎಲ್.ಲೋಹಿತ್, ತಂಡದ ವ್ಯವಸ್ಥಾಪಕ ಡಾ.ಉದಯಕುಮಾರ್ ಜತೆ ತಮ್ಮ ತಂಡ ಚೆನ್ನೈ ವಿಶ್ವವಿದ್ಯಾಲಯಕ್ಕೆ ಪ್ರಯಾಣ ಬೆಳೆಸಿದೆ ಎಂದು ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಪಿ.ಕೃಷ್ಣಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.