Saturday, August 15, 2026

BDA Apartments

Home Front Page ಇಂದು ‘ದಾದಾ’ ಬರ್ತ್ ಡೇ !

ಇಂದು ‘ದಾದಾ’ ಬರ್ತ್ ಡೇ !

ಬೆಂಗಳೂರು, ಜುಲೈ 08, 2021 (www.justkannada.in): ‘ದಾದಾ’ ಖ್ಯಾತಿಯ ಗಂಗೂಲಿ ಗುರುವಾರ 49ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ಹೌದು. ಟೀಂ ಇಂಡಿಯಾದ ಮಾಜಿ ನಾಯಕ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.

ಆಕ್ರಮಣಕಾರಿ ಆಟದ ಶೈಲಿಯಿಂದ ಅವರು ನಿಕ್ ನೇಮ್ ಗಳ ರಾಜನಾಗಿ ರಾರಾಜಿಸಿದ್ದಾರೆ. ದಾದಾ ಕಂಡರೆ ಅವರ ಅಭಿಮಾನಿಗಳಿ ಅಚ್ಚುಮೆಚ್ಚು.

ಸೌರವ್ ಗಂಗೂಲಿ 1992 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಪಂದ್ಯವನ್ನಾಡುವ ಮೂಲಕ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು. 2019ರ ಅಕ್ಟೋಬರ್ 23ರಂದು ಗಂಗೂಲಿ ಅವರು ಬಿಸಿಸಿಐ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.