ಗಾಯಕ ಸೋನು ನಿಗಮ್‌ ವಿರುದ್ದ ಕರವೇ ದೂರು ದಾಖಲು

ಬೆಂಗಳೂರು,ಮೇ,3,2025 (www.justkannada.in): ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ಗಾಯಕ ಸೋನು ನಿಗಮ್ ವಿರುದ್ದ ಕರ್ನಾಟಕ ರಕ್ಷಣಾ ವೇದಿಕೆ ಅವಲಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದೆ.

ಬೆಂಗಳೂರಿನ ಕಾಲೇಜುವೊಂದಕ್ಕೆ ಇತ್ತೀಚೆಗೆ  ಬಂದಿದ್ದ ಸೋನು ನಿಗಮ್  ಹಾಡು ಹಾಡುತ್ತಿದ್ದಾಗ ಈ ವೇಳೆ ಯುವಕನೊಬ್ಬ ಕನ್ನಡ ಹಾಡು ಹೇಳುವಂತೆ ಕೇಳಿಕೊಂಡಿದ್ದನಂತೆ. ಈ ಸಮಯದಲ್ಲಿ ಸೋನು  ಹಾಡುತ್ತಿದ್ದ ಹಾಡನ್ನೇ ಅರ್ಧಕ್ಕೆ ನಿಲ್ಲಿಸಿ  ‘ಕನ್ನಡ, ಕನ್ನಡ.. ಇದೇ ಕಾರಣದಿಂದ ಪಹಲ್ಗಾಮ್‌ನಲ್ಲಿ ದಾಳಿಯಾಗಿದ್ದು’ ಎಂದು ಹೇಳಿಕೆ ನೀಡಿದ್ದರು ಎನ್ನಲಾಗಿದೆ. ಈ ಮೂಲಕ ಸೋನು ನಿಗಮ್ ವಿವಾದಕ್ಕೆ ಗುರಿಯಾಗಿದ್ದಾರೆ.

ಇದೀಗ ಗಾಯಕ ಸೋನು ನಿಗಮ್‌ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಅವಲಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ಕರವೇ ನಗರ ಅಧ್ಯಕ್ಷ ಧರ್ಮರಾಜ್ ಗೌಡ ಅವರಿಂದ ದೂರು ಸಲ್ಲಿಕೆ ಆಗಿದೆ.  ಕನ್ನಡಿಗರ ಭಾಷಾ ಹೋರಾಟವನ್ನು ಭಯೋತ್ಪಾದನೆ ಹೋಲಿಕೆ ಮಾಡಿರುವ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

Key words:  Karave,  complaint, against,  singer, Sonu Nigam