Friday, August 14, 2026

BDA Apartments

Home Crime ತಂದೆಯನ್ನೇ ಹತ್ಯೆಗೈದು ಪುತ್ರ ಪರಾರಿ

ತಂದೆಯನ್ನೇ ಹತ್ಯೆಗೈದು ಪುತ್ರ ಪರಾರಿ

ತುಮಕೂರು,ಆಗಸ್ಟ್,14,2024 (www.justkannada.in):  ತಂದೆ-ತಾಯಿ ಅಂದರೇ ದೇವರ ಸಮಾನ ಎನ್ನುತ್ತಾರೆ. ಆದರೆ ಇಲ್ಲೊಬ್ಬ ಪುತ್ರ ಆಸ್ತಿಗಾಗಿ ತನ್ನ ತಂದೆಯನ್ನೇ ಹತ್ಯೆಗೈದು ಪರಾರಿಯಾಗಿದ್ದಾನೆ.

ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಅಲವನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿರುವುದು.  75 ವರ್ಷದ ತಂದೆ ವೆಂಕಟಪ್ಪನೇ ಪುತ್ರ ಸಿದ್ದಪ್ಪ(45)ನಿಂದ  ಹತ್ಯೆಯಾದವರು.

ಇತ್ತೀಚೆಗೆ ವೆಂಕಟಪ್ಪ ಜಮೀನು ಮಾರಿ 25 ಲಕ್ಷ ರೂ  ಹಣವನ್ನು ಮಗಳಿಗೆ ಕೊಟ್ಟಿದ್ದರಂತೆ. ಅಲ್ಲದೆ ಉಳಿದ ಜಮೀನನ್ನ ಮಗಳಿಗೆ ಬರೆದುಕೊಟ್ಟಿದ್ದು, ಇದರಿಂದ ಕೋಪಗೊಂಡಿದ್ದ ಮಗ ಸಿದ್ದಪ್ಪ ತಂದೆಯೊಂದಿಗೆ ಜಗಳವಾಡಿದ್ದ. ತಂದೆ ಹಾಗೂ ಮಗನ ನಡುವಿನ ಗಲಾಟೆ ತಾರಕಕ್ಕೇರಿತ್ತು.  ಈ ಮಧ್ಯೆ ಗ್ರಾಮದ ಹಿರಿಯ ಮುಖಂಡರ ಸಮ್ಮುಖದಲ್ಲಿ ನ್ಯಾಯ ಪಂಚಾಯತಿ ಕೂಡ ನಡೆದಿತ್ತು. ಆದರೆ ಪುತ್ರನಿಗೆ ಜಮೀನು, ಹಣ ನೀಡಲು ವೆಂಕಟ್ಟಪ್ಪ ಹಿಂದೇಟು ಹಾಕಿದ್ದರು ಎನ್ನಲಾಗಿದೆ.

ಇದರಿಂದ ಕೋಪಗೊಂಡ ಪುತ್ರ ಸಿದ್ದಪ್ಪ ತಂದೆ ವೆಂಕಟಪ್ಪನನ್ನ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.  ಘಟನಾ ಸ್ಥಳಕ್ಕೆ ಕೊಳಾಲ ಠಾಣಾ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದುಈ  ಕುರಿತು ಕೊಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words:  son, murder, father, Land, escape