Friday, August 14, 2026

BDA Apartments

Home Crime ಗುಂಡು ಹಾರಿಸಿಕೊಂಡು ಯೋಧ ಆತ್ಮಹತ್ಯೆಗೆ ಶರಣು.

ಗುಂಡು ಹಾರಿಸಿಕೊಂಡು ಯೋಧ ಆತ್ಮಹತ್ಯೆಗೆ ಶರಣು.

ದಾವಣಗೆರೆ,ಏಪ್ರಿಲ್,4,2023(www.justkannada.in): ಗುಂಡು ಹಾರಿಸಿಕೊಂಡು ಯೋಧ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ದಾವಣಗೆರೆಯ ಸಮೀಪದ ಹದಡಿ ಗ್ರಾಮದ ನಾಗರಾಜ್ ಮೃತ ಯೋಧ. ಕೆಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಯೋಧ ನಾಗರಾಜ್ ಕಳೆದ ಭಾನುವಾರ ಬೆಳಗ್ಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ತನ್ನ ಸ್ನೇಹಿತರು ಕುಟುಂಬದವರಿಗೆ ಕರೆ ಮಾಡಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆಂಬ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಯೋಧ ನಾಗರಾಜ್ ತಮ್ಮ ಊರಿಗೆ ಬರಲು ಫ್ಲೈಟ್ ಟಿಕೆಟ್ ಬುಕ್ ಮಾಡಿದ್ದರು. ಕಳೆದ ಮೂರು ತಿಂಗಳ ಹಿಂದೆ ಅಷ್ಟೇ ಗ್ರಾಮಕ್ಕೆ ಬಂದು ಹೋಗಿದ್ದರು. ಕಳೆದ 12 ವರ್ಷಗಳಿಂದ ಪಂಜಾಬ್, ಹರಿಯಾಣದಲ್ಲಿ ಸೇವೆ ಸಲ್ಲಿಸಿದ್ದರು.  ಪತ್ನಿ ಹಾಗೂ ಇಬ್ಬರು ಪುಟ್ಟ ಮಕ್ಕಳನ್ನು ಬಿಟ್ಟು ಯೋಧ ನಾಗರಾಜ್ ಆಗಲಿದ್ದಾರೆ. ಯೋಧನ ಪಾರ್ಥಿವ ಶರೀರ ಇಂದು ಸ್ವಗ್ರಾಮ ಹದಡಿಗೆ  ಬರಲಿದೆ.

Key words: soldier- suicide –after- firing.