ಪಂಜಾಬ್,ಮೇ,13,2025 (www.justkannada.in): ಭಯೋತ್ಪಾದನೆ ವಿರುದ್ದ ಭಾರತದ ಲಕ್ಷ್ಮಣ ರೇಖೆ ಸ್ಪಷ್ಟವಾಗಿದೆ. ಅಪರೇಷನ್ ಸಿಂಧೂರ ಯಶಸ್ಸು ಪ್ರತಿಯೊಬ್ಬ ಯೋಧನಿಗೂ ಸಲ್ಲುತ್ತದೆ. ಭಯೋತ್ಪಾದಕ ದಾಳಿ ಮತ್ತೆ ನಡೆದರೇ ನಮ್ಮ ಸೇನೆ ಮತ್ತೆ ತಕ್ಕ ಪ್ರತ್ಯುತ್ತರ ನೀಡುತ್ತದೆ ಎಂದು ಪ್ರಧಾನಿ ಮೋದಿ ನುಡಿದರು.
ಆದಂಪುರ ವಾಯುನೆಲೆಗೆ ಭೇಟಿ ನೀಡಿ ಯೋಧರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಭಯೋತ್ಪಾದಕರ ವಿರುದ್ದ ವಾಯುಸೇನೆ ದಾಳಿ ಮಾಡಿದ್ದು ಸಮರ್ಥವಾಗಿ ನಿಭಾಯಿಸಿದೆ. ಭಯೋತ್ಪಾದನೆ ವಿರುದ್ದ ಭಾರತದ ಲಕ್ಷ್ಮಣ ರೇಖೆ ಸ್ಪಷ್ಟವಾಗಿದೆ. ಮತ್ತೆ ಭಯೋತ್ಪಾದಕ ದಾಳಿ ನಡೆದರೆ ಮತ್ತೆ ಪ್ರತ್ಯುತ್ತರ ನೀಡುತ್ತದೆ. ಆದರೆ ಈ ಬಾರಿ ಪ್ರತ್ಯುತ್ತರ ಮತ್ತಷ್ಟು ಘೋರವಾಗಿರುತ್ತೆ ಎಂದರು.
ಯುದ್ಧಭೂಮಿಯಲ್ಲಿ ಸೈನಿಕರು ಭಾರತ್ ಮಾತಾ ಕಿ ಜೈ ಎಂದು ಜಪಿಸುವುದರಿಂದ ಶತ್ರುಗಳ ಬೆನ್ನುಮೂಳೆಯಲ್ಲಿ ನಡುಕ ಉಂಟಾಗುತ್ತದೆ. ಭಾರತೀಯ ವಾಯುಪಡೆಯು ಪಾಕಿಸ್ತಾನಕ್ಕೆ ತನ್ನ ಶಕ್ತಿಯನ್ನು ತೋರಿಸಿದೆ. ಭಾರತ್ ಮಾತಾ ಕಿ ಜೈ ಕೇವಲ ಘೋಷಣೆಯಲ್ಲ, ಇದು ದೇಶದ ಜನರ ಘೋಷಣೆ. ದೇಶಕ್ಕಾಗಿ ಬದುಕುವ ಸೈನಿಕನ ಪ್ರತಿಜ್ಞೆ ಎಂದರು.
ಭಾರತದ ಶಕ್ತಿ ಮತ್ತು ಸಾಮರ್ಥ್ಯವನ್ನು ನೋಡುವ ಮೂಲಕ ತಮ್ಮ ಜೀವನವು ಧನ್ಯವಾಗಿದೆ. ನಮ್ಮ ಸೇನೆಯ ಪರಾಕ್ರಮ ಭವಿಷ್ಯದ ಪೀಳಿಗೆಗೆ ಸ್ಫೂರ್ತಿಯಾಗಿದೆ. ಎಲ್ಲಾ ವೀರ ಸೈನಿಕರಿಗೆ ನನ್ನ ನಮನಗಳು. ಆಪರೇಷನ್ ಸಿಂಧೂರ ಘೋಷಣೆ ಪ್ರಪಂಚದಾದ್ಯಂತ ಪ್ರತಿಧ್ವನಿಸಿತು. ಸೇನೆಯು ದೇಶದ ಆತ್ಮ ವಿಶ್ವಾಸವನ್ನು ಹೆಚ್ಚಿಸಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.
Key words: success, Operation Sindhur, every soldier, PM Modi