ಡಿ.26 ರಂದು ಸೂರ್ಯಗ್ರಹಣ: ರಾಷ್ಟ್ರದ ಖಗೋಳ ವಿಜ್ಞಾನಿಗಳ ಗಮನ ಸೆಳೆದ ‘ಮಂಗಲ’ ಗ್ರಾಮ…

ಚಾಮರಾಜನಗರ,ಡಿ,25,2019(www.justkannada.in): ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಕಾಡಂಚಿನ ಗ್ರಾಮ ಮಂಗಲ ಈ ಗ್ರಾಮವು ಈಗ ರಾಷ್ಟ್ರದ ಖಗೋಳ ವಿಜ್ಞಾನಿಗಳ ಗಮನ ಸೆಳೆದಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯ ಮಂಗಲ ಗ್ರಾಮದತ್ತ ಎಲ್ಲರ ಗಮನವೂ ಕೇಂದ್ರಿಕೃತವಾಗಿದೆ.

ಡಿ.26(ನಾಳೆ)ರಂದು ನಡೆಯುವ ಸೂರ್ಯ ಗ್ರಹಣವು ದಕ್ಷಿಣ ಭಾರತದಲ್ಲಿ ಅದರಲ್ಲೂ ಮಂಗಲ  ಪ್ರದೇಶದಲ್ಲಿ ವಿಶೇಷವಾಗಿ ಗೋಚರಿಸುವ ಕಾರಣಕ್ಕೆ ವಿಜ್ಞಾನಿಗಳ ಆಸಕ್ತಿಯ ಪ್ರದೇಶವಾಗಿದೆ.  ದೇಶದ ಇತರೆ ಭಾಗದಲ್ಲಿ ಸೂರ್ಯಗ್ರಹಣದ ಪ್ರಮಾಣವು ಬೇರೆ ಬೇರೆ ರೀತಿಯಿದ್ದರೆ, ಶೇ.98ರಷ್ಟು ಸೂರ್ಯಗ್ರಹಣ ಗೋಚರಿಸಲಿದೆ ಎಂಬುದು ಖಗೋಳಾಸಕ್ತರ ಮಾಹಿತಿಯಾಗಿದೆ.

ಡಿಸೆಂಬರ್ 26ಕ್ಕೆ ಕೇತುಗ್ರಸ್ಥ ಸೂರ್ಯಗ್ರಹಣವು ಮಂಗಲ ಪ್ರದೇಶಗಳು ಪೂರ್ಣ ಪ್ರಮಾಣದ ಗ್ರಹಣ ಗೋಚರಿಸುವ ರೇಖೆಯಲ್ಲಿದ್ದು, ಈ ಪ್ರದೇಶಗಳು ವಿಜ್ಞಾನಿಗಳ ಆಸಕ್ತಿಯ ತಾಣಗಳಾಗಿವೆ. 26ರಂದು ಬೆಳಗ್ಗೆ 8.05ರಿಂದ 11ರ ತನಕ ಸೂರ್ಯಗ್ರಹಣ ಸಂಭವಿಸಲಿದೆ. ಬೆಳಗ್ಗೆ 9ರಿಂದ 9.30ರ ನಡುವೆ ಈ ಸ್ಥಳದಲ್ಲಿ ಪೂರ್ಣ ಪ್ರಮಾಣದಲ್ಲಿ ಸೂರ್ಯಗ್ರಹಣ ಗೋಚರಿಸಲಿದೆ ಎನ್ನಲಾಗುತ್ತಿದೆ.

ಬೆಂಗಳೂರಿನಲ್ಲಿ ಶೇ.89.4, ಚೆನ್ನೈನಲ್ಲಿ ಶೇ.84, ಮುಂಬೈನಲ್ಲಿ ಶೇ.78ರಷ್ಟು ಸೂರ್ಯಗ್ರಹಣವಿದ್ದರೆ, ಚಾಮರಾಜನಗರ ಜಿಲ್ಲೆಯಗುಂಡ್ಲುಪೇಟೆಯ ಮಂಗಲ ಗ್ರಾಮದಲ್ಲಿ  ಶೇ.98 ಗ್ರಹಣ ಕಾಣಬಹುದು ಎನ್ನುತ್ತಾರೆ ಚಾಮರಾಜನಗರ ಗ್ರ್ಯಾವಿಟಿ ಸೈನ್ಸ್ ಫೌಂಡೇಶನ್ ಸಂಸ್ಥೆಯ ಕಾರ್ಯದರ್ಶಿ ಅಭಿಷೇಕ್.

ಸೌರ ಕನ್ನಡಕ ವಿತರಣೆದಕ್ಷಿಣ ಭಾರತದಲ್ಲಿ ಇಂತಹ ಸೂರ್ಯಗ್ರಹಣ ವೀಕ್ಷಣೆಗೆ ಬಹಳ ವರ್ಷವೇ ಕಾಯಬೇಕು. ಹೀಗಾಗಿ, ಈ ಅಪರೂಪದ ವಿಸ್ಮಯವನ್ನು ಯಾರೂ ತಪ್ಪಿಸಿಕೊಳ್ಳಬಾರದು. ಚಾಮರಾಜನಗರ ಗ್ರ್ಯಾವಿಟಿ ಸೈನ್ಸ್ ಫೌಂಡೇಶನ್ ಸಂಸ್ಥೆ ವತಿಯಿಂದ ವಿದ್ಯಾರ್ಥಿ ಗಳು ಸಾರ್ವಜನಿಕರಿಗೆ ವೀಕ್ಷಣೆಗೆ ಸೌರ ಕನ್ನಡಕಗಳು ಪಡೆಯಬಹುದಾಗಿದೆ ಇದರ ದರ 20ರೂಪಾಯಿ ಸಿಗುತ್ತಾದೆ ಗ್ರ್ಯಾವಿಟಿ ಸೈನ್ಸ್ ಫೌಂಡೇಶನ್ ಸಂಸ್ದೆಯ ಕಾರ್ಯದರ್ಶಿ ಅಭಿಷೇಕ್ ಸಂಪರ್ಕಿಸಬಹುದಾಗಿದೆ 9742065065.

Key words: Solar Eclipse –chamarajanagr-Mangala village-attracted the – nation- astronomers.