ಮೈಸೂರಿನಲ್ಲಿ ಮಾಗಿ ಉತ್ಸವಕ್ಕೆ ಚಾಲನೆ

ಮೈಸೂರು,ಡಿ,24,2019: ಇಂದಿನಿಂದ ಜನವರಿ 2ರವರೆಗೆ ಮೈಸೂರಿನಲ್ಲಿ ಮಾಗಿ ಉತ್ಸವ ಆಯೋಜನೆ ಮಾಡಲಾಗಿದೆ. ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಅನಾವರಣಗೊಂಡಿರುವ ಫಲಪುಷ್ಪ ಪ್ರದರ್ಶನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಚಾಲನೆ ನೀಡಿದರು.

ಬೆಂಗಳೂರು ಅರಮನೆ, ಬೆಂಕಿಗಾಹುತಿಯಾದ ಮೈಸೂರಿನ ಗಂಧದ ಅರಮನೆ, ಆನೆಗಾಡಿ, ಕುದುರೆ ಸಾರೋಟು ಸೇರಿದಂತೆ ಅಂದಿನ ಆಳರಸರ ಪ್ರತಿಕೃತಿಗಳು, ಇಸ್ರೋ ಸಾಧನೆ ಸಾರುವ ರಾಕೆಟ್ ಕಲಾಕೃತಿಗಳು ವಿವಿಧ ಬಗೆಯ ಹೂಗಳಿಂದ ನಿರ್ಮಾಣ ಮಾಡಲಾಗಿದೆ

ಸಚಿವರಿಗೆ ಶಾಸಕರಾದ ಜಿ.ಟಿ.ದೇವೇಗೌಡ, ಎಲ್‌. ನಾಗೇಂದ್ರ, ಡಿಸಿ ಅಭಿರಾಮ್ ಜಿ ಶಂಕರ್, ಮೇಯರ್ ಪುಷ್ಪಲತಾ ಜಗನ್ನಾಥ್ ಸೇರಿ ಹಲವರು ಸಾಥ್ ನೀಡಿದರು.