ದೇವಾಲಯದಲ್ಲಿ ದರೋಡೆಕೋರರಿಂದ ಮೂವರ ಹತ್ಯೆ ಕೇಸ್: ಸಂತ್ರಸ್ತರ ಕುಟುಂಬಕ್ಕೆ ಪರಿಹಾರ ಘೋಷಿಸಿದ ಸಿಎಂ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು, ಸೆಪ್ಟೆಂಬರ್,11,2020(www.justkannada.in) : ಮಂಡ್ಯದ ಅರ್ಕೇಶ್ವರ ದೇವಾಲಯದಲ್ಲಿ ದರೋಡೆಕೋರರಿಂದ ಹತ್ಯೆಯಾದ ಮೂವರ  ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರವನ್ನ ಸಿಎಂ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮೂಲಕ ಘೋಷಿಸಿದ್ದಾರೆ.

jk-logo-justkannada-logo

ಅರ್ಚಕ ಸೇರಿದಂತೆ ಮೂವರ ಹತ್ಯೆಯಿಂದ ನೋವಾಗಿದೆ. ತಪ್ಪಿತಸ್ಥರ ವಿರುದ್ಧ ಕೂಡಲೇ ಶಿಸ್ತು ಕ್ರಮ ಕೈಗೊಳ್ಳುವಂತೆ ಸೂಚಿಸುವುದಾಗಿ ಟ್ವೀಟ್ ಮೂಲಕ ತಿಳಿಸಿದ್ದಾರೆ.Slain-Mandya-5 lakhs-compensation-three-CM B.S.Yeddyurappa

ಮಂಡ್ಯದ ಅರಕೇಶ್ವರ ದೇವಸ್ಥಾನದಲ್ಲಿ  ಕನ್ನಹಾಕಿ ಹುಂಡಿ ದೋಚಿದ ದುಷ್ಕರ್ಮಿಗಳು ಈ ವೇಳೆ ಅರ್ಚಕ ಹಾಗೂ ಕಾವಲುಗಾರರಾದ ಗಣೇಶ, ಪ್ರಕಾಶ, ಆನಂದ  ಮೂವರ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ಪರಾರಿಯಾಗಿದ್ದರು.

 

key words : Slain-Mandya-5 lakhs-compensation-three-CM B.S.Yeddyurappa