ಬೆಂಗಳೂರು,ಮೇ,20,2021(www.justkannada.in): ಕೋವಿಡ್ ಟೆಸ್ಟ್ ನಕಲಿ ವರದಿ ನೀಡುತ್ತಿದ್ದ 6 ಮಂದಿಯನ್ನ ಬೆಂಗಳೂರಿನ ಹಲಸೂರು ಗೇಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಮೂವರು ವೈದ್ಯರು, ಮೂವರು ವೈದ್ಯಕೀಯ ಸಿಬ್ಬಂದಿಯನ್ನ ಬಂಧಿಸಲಾಗಿದೆ. ಬಂಧಿತರನ್ನು ಆಯುರ್ವೇದ ವೈದ್ಯೆ ಪ್ರಜ್ವಲ ಹಾಗೂ ಆಕೆ ಪತಿ, ದಂತ ವೈದ್ಯ ಶೇಖರ್, ಸ್ವ್ಯಾಬ್ ಕಲೆಕ್ಟರ್ ಈಶ್ವರ್, ಮೋಹನ್, ಡಾಟಾ ಆಪರೇಟರ್ ವರುಣ್ ಬಂಧಿತ ಆರೋಪಿಗಳು.
ಈ ಆರೋಪಿಗಳು ರೆಮ್ ಡಿಸಿವಿರ್ ಅಕ್ರಮ ಮಾರಾಟದಲ್ಲೂ ಭಾಗಿಯಾಗಿದ್ದರು. 6 ಆರೋಪಿಗಳು ಚಾಮರಾಜಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಕರ್ತವ್ಯಕ್ಕೆ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿದ್ದರು ಎನ್ನಲಾಗಿದೆ. ಬಂಧಿತ ಆರೋಪಿಗಳನ್ನ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
Key words: Six- arrested -covid -fake report-bangalore






