ಮೈಸೂರು,ಆಗಸ್ಟ್,8,2025 (www.justkannada.in): ಎಸ್ ಐಟಿ ಅಧಿಕಾರಿ ಜಿತೇಂದ್ರ ಕುಮಾರ್ ದಯಾಮ ಬದುಕಿರುವ ಮಹಿಳೆ ಸತ್ತಿದ್ದಾಳೆ ಅಂತ ಪ್ರೂವ್ ಮಾಡಲು ಹೊರಟಿದ್ದವರು. ಶವವನ್ನೇ ಗುರುತಿಸಿ ಪತ್ತೆ ಹಚ್ಚಲಾಗದ ಈ ಅಧಿಕಾರಿಯಿಂದ ನ್ಯಾಯ ಸಿಗುತ್ತಾ? ಹೀಗಾಗಿ ಧರ್ಮಸ್ಥಳ ಎಸ್ ಐಟಿಯಿಂದ ಜಿತೇಂದ್ರರನ್ನ ಕೈ ಬಿಡಿ ಎಂದು ಮೈಸೂರಿನ ಮಲ್ಲಿಗೆ ಪ್ರಕರಣದ ವಕೀಲ ಪಾಂಡುಪೂಜಾರಿ ಆಗ್ರಹಿಸಿದ್ದಾರೆ.
ಧರ್ಮಸ್ಥಳ ಎಸ್ ಐಟಿ ಅಧಿಕಾರಿ ಜಿತೇಂದ್ರ ವಿರುದ್ಧ ಗಂಭೀರ ಆರೋಪ ಮಾಡಿರುವ ವಕೀಲ ಪಾಂಡುಪೂಜಾರಿ, ಪಿರಿಯಾಪಟ್ಟಣ ಬೆಟ್ಟದಪುರದ ಮಲ್ಲಿಗೆ ಮರ್ಡರ್ ಕೇಸ್ ನಲ್ಲಿ ಬದುಕಿರುವ ಮಹಿಳೆ ಮಲ್ಲಿಗೆ ಸತ್ತಿದ್ದಾಳೆ ಅಂತ ಪ್ರೂವ್ ಮಾಡಲು ಐಓ ಜಿತೇಂದ್ರ ಕುಮಾರ್ ಹೊರಟಿದ್ದರು. ಯಾವುದೋ ಮೃತದೇಹವನ್ನ ಮಲ್ಲಿಗೆಯದ್ದೇ ಅಂತ ನಿರಪರಾಧಿಯನ್ನ ಅಪರಾಧಿ ಮಾಡಿದ್ದವರು ಜಿತೇಂದ್ರ ಕುಮಾರ್. ಸತ್ತ ಹೆಣವನ್ನ ಬದುಕಿರುವ ಮಲ್ಲಿಗೆ ಅಂತ ಯುಡಿಆರ್ ಪ್ರಕರಣ ಮಾಡಿದ್ದರು ಎಂದು ದೂರಿದ್ದಾರೆ.
ಪಕ್ಕದ ಜಮೀನಿನ ಮಾಲೀಕ ಬಳಿ ಖಾಲಿ ಪೇಪರ್ ಗೆ ಸಹಿ ಪಡೆದು ಮಲ್ಲಿಗೆ ಕೇಸ್ ಗೆ ಐಓ ಜೀತೆಂದ್ರ ಕುಮಾರ್ ಟ್ವಿಸ್ಟ್ ನೀಡಿದ್ದರು. ಪ್ರೊಬೇಷನರಿ ಹಂತದಲ್ಲೇ ಯಡವಟ್ಟು ಮಾಡಿ ಅಧಿಕಾರಿ ಜಿತೇಂದ್ರ ಅವರು ಮಲ್ಲಿಗೆ ಕೇಸ್ ಹಳ್ಳಹಿಡಿಸಿದ್ದರು. ಇನ್ನು ಧರ್ಮಸ್ಥಳ ಕೇಸ್ ನಲ್ಲಿ ನೊಂದ ,ಅತ್ಯಾಚಾರಕ್ಕೆ ಒಳಗಾದ ಮಹಿಳೆಯರು, ಮಕ್ಕಳಿಗೆ ಹೇಗೆ ನ್ಯಾಯ ಕೊಡ್ತಾರೆ. ಶವವನ್ನೇ ಗುರುತಿಸಿ ಪತ್ತೆ ಹಚ್ಚಲಾಗದ ಅಧಿಕಾರಿಯಿಂದ ನ್ಯಾಯ ಸಿಗುತ್ತಾ? ನೂರಾರು ಬುರುಡೆಗಳನ್ನ ಹುಡುಕಿ ಸತ್ಯಶೋಧನೆ ಮಾಡುತ್ತಾರಾ? ತಕ್ಷಣ ಧರ್ಮಸ್ಥಳ ಪ್ರಕರಣದ ಎಸ್ ಐಟಿ ಅಧಿಕಾರಿ ಜಿತೇಂದ್ರರನ್ನ ಕೈ ಬಿಡಬೇಕು ಎಂದು ಪಾಂಡುಪೂಜಾರಿ ಒತ್ತಾಯಿಸಿದ್ದಾರೆ.
ಈ ಬಗ್ಗೆ ನಾನು ಮೇಲಾಧಿಕಾರಿಗಳಿಗೆ ದೂರು ಕೊಡುತ್ತೇನೆ. ಮಲ್ಲಿಗೆ ಬದುಕಿರುವ ಕಾರಣ ನೊಂದ ಮಲ್ಲಿಗೆ ಗಂಡ ಸುರೇಶ್ ಗೆ ಅನ್ಯಾಯ ಆಗಿದೆ. ಈ ಅನ್ಯಾಯ ಎಸಗಿದ ಮೂವರು ಪೊಲೀಸ್ ಅಧಿಕಾರಿಗಳ ಅಮಾನತ್ತಾಗಿದೆ. ಈ ಪ್ರಕರಣದಲ್ಲಿ ಇಲಾಖಾ ತನಿಖೆ ನಡೆಸಲು ಕೋರ್ಟ್ ಆದೇಶಿಸಿದೆ ಈ ಕಾರಣಕ್ಕೆ ಜಿತೇಂದ್ರ ಅವರನ್ನ ಕೂಡಲೇ ಅಮಾನತು ಮಾಡಬೇಕು. ಈ ಕುರಿತು ನ್ಯಾಯಾಲಯದಲ್ಲಿ ಜಿತೇಂದ್ರ ವಿರುದ್ಧ ಕೇಸ್ ದಾಖಲಿಸಿರುವೆ. ಶೀಘ್ರದಲ್ಲೇ ಜಿತೇಂದ್ರಗೆ ಕಠಿಣ ಕ್ರಮ ಆಗಲಿದೆ. ಈ ಕಾರಣಕ್ಕೆ ಧರ್ಮಸ್ಥಳ ಎಸ್ ಐಟಿಯಿಂದ ಜಿತೇಂದ್ರರನ್ನ ಕೈ ಬಿಡಿ ಎಂದು ಪಾಂಡೂ ಪೂಜಾರಿ ತಿಳಿಸಿದ್ದಾರೆ.
Key words: Serious, allegations, SIT, Officer, Jitendra, Lawyer