ಸರ್.ಎಂ ವಿಶ್ವೇಶ್ವರಯ್ಯ ಅವರ ಕೊಡಗೆ ಸ್ಮರಿಸಿದ ಮೈಸೂರು ಮೇಯರ್ ಸುನಂದ ಪಾಲನೇತ್ರ.

ಮೈಸೂರು,ಸೆಪ್ಟಂಬರ್,15,2021(www.justkannada.in): ಭಾರತರತ್ನ ದಿವಾನ್ ಸರ್ ಎಂ. ವಿಶ್ವೇಶ್ವರಯ್ಯ ರವರ 161ನೇ ಜಯಂತಿಯ ಅಂಗವಾಗಿ ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯ ಅಭಿಮಾನಿಗಳ ಬಳಗ ವತಿಯಿಂದ “ಮೈಸೂರು ಸಂಸ್ಥಾನದಲ್ಲಿ ವಿಶ್ವೇಶ್ವರಯ್ಯ” ಕಾರ್ಯಕ್ರಮವನ್ನು ಸಯ್ಯಾಜಿರಾವ್ ರಸ್ತೆಯಲ್ಲಿರುವ ಸರ್.ಎಂ ವಿಶ್ವೇಶ್ವರಯ್ಯ ವೃತ್ತ (ಕೆಆರ್ ಆಸ್ಪತ್ರೆ ಮುಂಭಾಗ) ಆಯೋಜಿಸಲಾಗಿತ್ತು.

ಸರ್.ಎಂ.ವಿಶ್ವೇಶ್ವರಯ್ಯ ಅವರ ಭಾವಚಿತ್ರಕ್ಕೆ ಮೈಸೂರು ಮೇಯರ್ ಸುನಂದ ಪಾಲನೇತ್ರ ಅವರು ಪುಷ್ಪನಮನ ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ನೀಡಿದರು, ನಂತರ ಮಾತನಾಡಿ,  ಮೈಸೂರು ನಗರ ಸಾಂಸ್ಕೃತಿಕ ರಾಜಧಾನಿಯಾಗಿ ಗುರುತಿಸಿಕೊಂಡಿದೆ ಎಂದರೆ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಪರಿಕಲ್ಪನೆಗೆ ಪುಷ್ಠಿ ನೀಡಿದ ಯಂತ್ರ’ಋಷಿ ವಿಶ್ವೇಶ್ವರಯ್ಯ ರವರ ಕಾರ್ಯತಂತ್ರ ಆಡಳಿತ ವೈಖರಿ ಪ್ರಮುಖವಾದದು, ಶಿಕ್ಷಣ ನೀರಾವರಿ, ಕೃಷಿ, ಔದ್ಯಮಿಕ, ವಾಣಿಜ್ಯ, ಕೈಗಾರಿಕೋದ್ಯಮ, ಕಾರ್ಖಾನೆ, ವಿದ್ಯುತ್ ಸ್ಥಾವರ ಕನ್ನಡ ಭಾಷಾ ಕೊಡುಗೆ, ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ ಎಂದರು,

ನಂತರ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ ರಾಜೀವ್ ರವರು ಮಾತನಾಡಿ ಕನ್ನಂಬಾಡಿ ಮೊದಲ ಹಂತದಲ್ಲಿ 80 ಅಡಿ ಉದ್ದೇಶಿತ ನಿರ್ಮಾಣ ಯೋಜನೆಯಿದ್ದಾಗ ನೀರಾವರಿಗಾಗಲಿ ಕೃಷಿ ರೈತಾಪಿ ಚಟುವಟಿಕೆಗೆ ಸಹಕಾರಿಯಗದೆ ನೆನೆಗುದಿಗೆ ಬಿದ್ದಿತು, ಇದರ ವಿಷಯ ಅರಿತ ದಿವಾನ್ ಸರ್. ಎಂ ವಿಶ್ವೇಶ್ವರಯ್ಯ ರವರು ಮದ್ರಾಸ್ ಸರ್ಕಾರ ಬ್ರಿಟಿಷ್ ಆಳ್ವಿಕೆಯಲ್ಲಿದ್ದ ಸಂಧರ್ಭದಲ್ಲಿ ರೈತಾಪಿ ವರ್ಗವನ್ನ ಕಾಪಾಡಲು ರಾಜ್ಯದ ಅಭಿವೃದ್ಧಿಯ ಪರವಾಗಿ ವಾದವನ್ನು ಮಾಡಿ ಅನುಮತಿ ಪಡೆದರು ಅವರ ಕ್ರಿಯಾತ್ಮಕ ಶ್ರಮದಿಂದ 124ಅಡಿ ನಿರ್ಮಿಸಲು ಸಹಕಾರಿಯಾಗಿತು ಇವತ್ತಿಗೂ ನಮ್ಮ ಪೂರ್ವಜರು ಹಳೇ ಮೈಸೂರು ಮಂಡ್ಯ ಭಾಗದ ಮನೆಗಳಲ್ಲಿ ವಿಶ್ವೇಶ್ವರಯ್ಯ ಭಾವಚಿತ್ರ  ಪೂಜಿಸುತ್ತಾರೆ ಎಂದರು.

ಈ ವೇಳೆ ,ಬಿಜೆಪಿ ನಗರ ಅಧ್ಯಕ್ಷ ಟಿ ಎಸ್ ಶ್ರೀವತ್ಸ ,ಮೈಲ್ಯಾಕ್ ಅಧ್ಯಕ್ಷ ಎನ್ ವಿ ಫಣೀಶ್ ,ಕಾಂಗ್ರೆಸ್ ಯುವ ಮುಖಂಡರಾದ ಎನ್ ಎಂ ನವೀನ್ ಕುಮಾರ್ ,ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಅಧ್ಯಕ್ಷರಾದ ಡಿ ಟಿ ಪ್ರಕಾಶ್ ,ನಗರ ಪಾಲಿಕಾ ಸದಸ್ಯರಾದ ಮಾ ವಿ ರಾಮ್ ಪ್ರಸಾದ್, ಎಂ ಡಿ ನಾಗರಾಜ್ ,ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ಲಕ್ಷ್ಮೀದೇವಿ ,ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್ ,ವಿಕ್ರಂ ಅಯ್ಯಂಗಾರ್ ,ಅಜಯ್ ಶಾಸ್ತ್ರಿ ,ಜೋಗಿ ಮಂಜು ಇನ್ನಿತರರು ಹಾಜರಿದ್ದರು.

Key words: Sir M Vishweshwaraiah-jayanthi- Mysore -Mayor- Sunanda Palanetra