Tuesday, August 25, 2026

BDA Apartments

Home Crime ಬೆಳ್ಳಿ ಆಸೆಗೆ ಕೆಲಸ ಕೊಟ್ಟವನನ್ನೇ ಕೊಂದ ಆರೋಪಿ ಅಂದರ್.

ಬೆಳ್ಳಿ ಆಸೆಗೆ ಕೆಲಸ ಕೊಟ್ಟವನನ್ನೇ ಕೊಂದ ಆರೋಪಿ ಅಂದರ್.

ಮೈಸೂರು,ಮೇ,10,2022(www.justkannada.in): ಬೆಳ್ಳಿ ಮೇಲಿನ ಆಸೆಗೆ ಕೆಲಸ ಕೊಟ್ಟವನನ್ನೇ ಕೊಂದು ತಲೆಮರಿಸಿಕೊಂಡಿದ್ದ ಆರೋಪಿಯನ್ನ  ಮೈಸೂರಿನ ಲಷ್ಕರ್ ಠಾಣಾ ಪೊಲೀಸರು ಬಂಧಿಸಿದ್ದಾರೆ.

ರಾಜಸ್ಥಾನ ಮೂಲದ ಅರ್ಜುನ್‌ಕುಮಾರ್ (28) ಬಂಧಿತ ಆರೋಪಿ. ಗೋವಿಂದ(30) ಕೊಲೆಯಾಗಿದ್ದ ವ್ಯಕ್ತಿ. ನಗರದ ಸುಮತಿನಾಥ ಜೈನಮಂದಿರಕ್ಕೆ ಸಂಬಂಧಿಸಿದ ಬೆಳ್ಳಿ ಕೆಲಸ ಮಾಡಲು ಗೋವಿಂದ ತಮ್ಮ ಸಹಾಯಕ್ಕಾಗಿ ಅರ್ಜುನ್ ಕುಮಾರ್‌ನನ್ನು ಕರೆತಂದಿದ್ದ. ಮಂದಿರದ ಕೆಲಸಕ್ಕಾಗಿ ಬೇರುಮಲ್ ಜೈನ್ ಎನ್ನುವವರು 14 ಕೆ.ಜಿ. ಬೆಳ್ಳಿ ಕೊಟ್ಟಿದ್ದರು.

ಹಳ್ಳದಕೇರಿಯ ಬಳಿ ಉಳಿದುಕೊಂಡಿದ್ದ ಇಬ್ಬರೂ ಬೆಳ್ಳಿ ಕೆಲಸದಲ್ಲಿ ನಿರತರಾಗಿದ್ದರು. ಈ ವೇಳೆ ಏಪ್ರಿಲ್ 27ರಂದು ಗೋವಿಂದನನ್ನು ಕೊಲೆ ಮಾಡಿ ಅರ್ಜುನ್ ಕುಮಾರ್ ಲಕ್ಷಾಂತರ ರೂ. ಮೌಲ್ಯದ ಬೆಳ್ಳಿ ಗಟ್ಟಿಗಳ ಸಮೇತ ತಲೆಮರೆಸಿಕೊಂಡಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಲಷ್ಕರ್ ಠಾಣೆ ಪೊಲೀಸರು. ಕಾರ್ಯಾಚರಣೆ ನಡೆಸಿ ಅರ್ಜುನ್ ಕುಮಾರ್‌ ನನ್ನು ಬಂಧಿಸಿದ್ದಾರೆ‌. ಬಂಧಿತ ಆರೋಪಿಯಿಂದ 8 ಲಕ್ಷ ರೂ. ಮೌಲ್ಯದ 12 ಕೆ.ಜಿ. ಬೆಳ್ಳಿ ವಶಕ್ಕೆ ಪಡೆದಿದ್ದಾರೆ.

Key words: silver – murder-accused-arrest-mysore