Tuesday, September 15, 2026

BDA Apartments

ಬೆಳ್ಳಿ ತೃಪ್ತಿ ತಂದಿಲ್ಲ, ಪ್ಯಾರಿಸ್’ನಲ್ಲಿ ಚಿನ್ನ ಗ್ಯಾರಂಟಿ ಎಂದ ರವಿ ದಹಿಯ...
Home Front Page ಬೆಳ್ಳಿ ತೃಪ್ತಿ ತಂದಿಲ್ಲ, ಪ್ಯಾರಿಸ್’ನಲ್ಲಿ ಚಿನ್ನ ಗ್ಯಾರಂಟಿ ಎಂದ ರವಿ ದಹಿಯಾ

ಬೆಳ್ಳಿ ತೃಪ್ತಿ ತಂದಿಲ್ಲ, ಪ್ಯಾರಿಸ್’ನಲ್ಲಿ ಚಿನ್ನ ಗ್ಯಾರಂಟಿ ಎಂದ ರವಿ ದಹಿಯಾ

ಬೆಂಗಳೂರು, ಆಗಸ್ಟ್ 05, 2020 (www.justkannada.in): ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಕನಸನ್ನು ನನಸಾಗಿಸಲು ಪ್ರಯತ್ನಿಸುತ್ತೇನೆ ಎಂದು ಭಾರತದ ಯುವ ಕುಸ್ತಿಪಟು ರವಿ ದಹಿಯಾ ಹೇಳಿದ್ದಾರೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆಲ್ಲಲು ಅರ್ಹರಾಗಿರಬಹುದು, ಆದರೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಕನಸನ್ನು ನನಸಾಗಿಸಲು ಪ್ರಯತ್ನಿಸುತ್ತೇನೆ ಎಂದು ರವಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೆಳ್ಳಿ ಗೆಲ್ಲಲು ನಾನು ಟೋಕಿಯೊಗೆ ಬರಲಿಲ್ಲ.. ನನಗೆ ಈ ಸಾಧನೆ ತೃಪ್ತಿ ತಂದಿಲ್ಲ ಎಂದು ಕುಸ್ತಿಪಟು ರವಿ ದಹಿಯಾ ಹೇಳಿಕೊಂಡಿದ್ದಾರೆ. ಕೇವಲ ಹಣದ ಬಗ್ಗೆ ಮಾತ್ರ ಯೋಚಿಸುತ್ತಿಲ್ಲ. ಅವರ ಗಮನವು ಒಲಿಂಪಿಕ್ ಚಿನ್ನದ ಪದಕವನ್ನು ಗೆಲ್ಲುವುದರ ಮೇಲೆ ಮಾತ್ರ ಎಂದು ಹೇಳಿದರು.