ಸೈಲೆಂಟ್ ಸುನೀಲ ಬಿಜೆಪಿ ಸೇರ್ಪಡೆಗೆ ಅವಕಾಶವಿಲ್ಲ- ನಳೀನ್ ಕುಮಾರ್ ಕಟೀಲ್ ಸ್ಪಷ್ಟನೆ.

ಬೆಂಗಳೂರು,ನವೆಂಬರ್,29,2022(www.justkannada.in): ರೌಡಿಶೀಟರ್ ಆಗಿದ್ದ ಸೈಲೆಂಟ್ ಸುನೀಲ ಬಿಜೆಪಿ ನಾಯಕರ ಜೊತೆ  ವೇದಿಕೆಯಲ್ಲಿ ಕಾಣಿಸಿಕೊಂಡ ವಿಚಾರ ಭಾರಿ ಸದ್ದು ಮಾಡಿದ್ದು ವಿಪಕ್ಷಗಳು ಬಿಜೆಪಿಯನ್ನ ಟೀಕಿಸಿದ್ದವು.

ಈ ಸಂಬಂಧ ಸ್ಪಷ್ಟನೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್,  ಸೈಲೆಂಟ್ ಸುನೀಲ ಬಿಜೆಪಿ ಸೇರ್ಪಡೆಗೆ ಅವಕಾಶವಿಲ್ಲ.  ಯಾವುದೇ ಕಾರಣಕ್ಖೂ ಪಕ್ಷಕ್ಕೆ ಸೇರಿಸಿಕೊಳ್ಳಲ್ಲ ಈ ರೀತಿ ಘಟನೆ ನಡೆಯದಂತೆ  ನೋಡಿಕೊಳ್ಳಬೇಕು. ಎಲ್ಲ ವಿಚಾರಗಳನ್ನ ಪಕ್ಷದ ಗಮನಕ್ಕೆ ತರಬೇಕು.  ಉಗ್ರರು ಭಯೋತ್ಪಾದನೆಗೆ ಬೆಂಬಲ ಕೊಡುವವರು ಹಾಗೂ ಅಪರಾಧ ಹಿನ್ನೆಲೆ ಉಳ್ಳವರನ್ನ ಬಿಜೆಪಿ ಸಹಿಸಲ್ಲ  ಎಂದು ತಿಳಿಸಿದ್ದಾರೆ.

 

 

ಹಾಗೆಯೇ ಸೈಲೆಂಟ್ ಸುನೀಲನ ಕಾರ್ಯಕ್ರಮದಲ್ಲಿದ್ದವರಿಂದ ವಿವರಣೆ ಕೇಳಲಾಗುವುದು ಎಂದು ನಳೀನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

Key words: Silent Sunil – not -allowed – join- BJP-Naleen Kumar Kateel.