ರಾಜ್ಯದಲ್ಲಿ ಜೆಡಿಎಸ್ ಅಲೆ ಸೃಷ್ಠಿ: ಹಳ್ಳಿಗಳಲ್ಲಿ ಬೆಂಬಲ ವ್ಯಕ್ತವಾಗಿದೆ- ಹೆಚ್.ಡಿ ಕುಮಾರಸ್ವಾಮಿ.

ಬೆಂಗಳೂರು,ನವೆಂಬರ್,29,2022(www.justkannada.in): ರಾಜ್ಯದಲ್ಲಿ ಜೆಡಿಎಸ್ ಅಲೆ ಸೃಷ್ಠಿಯಾಗಿದೆ. ಹಳ್ಳಿ ಹಳ್ಳಿಗಳಲ್ಲಿ ಜೆಡಿಎಸ್ ಗೆ ಬೆಂಬಲ ವ್ಯಕ್ತವಾಗಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ರಾಜ್ಯದಲ್ಲಿ ಜೆಡಿಎಸ್ ಅಲೆ ಸೃಷ್ಠಿಯಾಗಿದೆ. ಹೆಚ್.ಡಿ ಕುಮಾರಸ್ವಾಮಿ ಸುಮ್ಮನೆ ಘೋಷಣೆ ಮಾಡ್ತಾನೆ ಅಂತಾರೆ. ಜೆಡಿಎಸ್ ಅಧಿಕಾರಕ್ಕೆ ಬರಲ್ಲ ಅಂತಾ ಟೀಕೆ ಮಾಡುತ್ತಾರೆ. ಜೆಡಿಎಸ್ ಗೆ ಹಳ್ಳಿಗಳಲ್ಲಿ ಜನರ ಬೆಂಬಲ ವ್ಯಕ್ತಾಗಿದೆ. ಗೊಂದಲ ಸರಿಪಡಿಸಿ ಅಭ್ಯರ್ಥಿ ಆಯ್ಕೆ ಮಾಡುತ್ತೇವೆ ಎಂದರು.

ಜನರ ರಕ್ತಹೀರುವವರು ಎಂದಿದ್ದ ಸಚಿವ ಅಶ್ವಥ್ ನಾರಾಯಣ್ ಗೆ ತಿರುಗೇಟು ನೀಡಿದ ಹೆಚ್.ಡಿ ಕುಮಾರಸ್ವಾಮಿ,  ಯಾರ ಬಗ್ಗೆ ಹೇಳಿದ್ದಾರೆ ಅಂತಾ ಗೊತ್ತಿಲ್ಲ. ನಮಗೆ  ಅವರಷ್ಟು ತಿಳುವಳಿಕೆ ಇಲ್ಲ. ರಕ್ತ ಪಿಪಾಸುಗಳು ಅಂತಾ ಹೇಳಿದ್ದಾರೆ.  ನಿನ್ನೆ ಬಿಜೆಪಿಯವರು  ಯಾರನ್ನೋ ಸೇರಿಸಿಕೊಂಢ್ರಲ್ಲ ಅವರ ಇತಿಹಾಸ  ತೆಗೆದು ನೋಡಿದ್ರೆ ಗೊತ್ತಾಗುತ್ತೆ ಯಾರು ರಕ್ತ ಹೀರುತ್ತಾ ಇದ್ದರು ಅಂತಾ  ಎಂದು ಟಾಂಗ್ ನೀಡಿದರು.

Key words: JDS -wave -creation – state-former CM-HD Kumaraswamy.